ಉಡುಪಿ: ಸಟ್ಟುಗ ಬಿಸಿ ಮಾಡಿ ಬರೆ ಹಾಕಿ ಅತ್ತೆ ಮಾವನಿಗೆ ಚಿತ್ರಹಿಂಸೆ ► ಸೊಸೆಯ ಬಂಧನ

(ನ್ಯೂಸ್ ಕಡಬ) newskadaba.com ಉಡುಪಿ, ಸೆ.19, ಅತ್ತೆ ಮಾವನಿಗೆ ನಿರಂತರ ಚಿತ್ರಹಿಂಸೆ ನೀಡಿ ಕೊಲೆ ಮಾಡಲು ಯತ್ನಿನಿಸಿದ ಸೊಸೆಯನ್ನ ಮಲ್ಪೆ ಠಾಣಾ ವ್ಯಾಪ್ತಿಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಲ್ಲೆಗೊಳಗಾದವರ ಮಕ್ಕಳು ಸೊಸೆ ಅಶ್ವಿನಿ ಪೈ ವಿರುದ್ಧ ಕೇಸ್ ದಾಖಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ಮಲ್ಪೆಯ ನಿವಾಸದಲ್ಲಿದ್ದ ಅಶ್ವಿನಿಯನ್ನು ಪೊಲೀಸರು ಬಂಧಿಸಿದ್ದಾರೆ.

ಉಡುಪಿಯ ತೆಂಕ ನಿಡಿಯೂರು ಗ್ರಾಮದ ಕೆಳಾರ್ಕಳ ಬೆಟ್ಟುವಿನಲ್ಲಿ ಮಾವ ವೆಂಕಟೇಶ ಪೈ, ಅತ್ತೆ ವೀಣಾ ಪೈ ಅವರಿಗೆ ಸೊಸೆ ಅಶ್ವಿನಿ ಪೈ ಮನಬಂದಂತೆ ಥಳಿಸಿದ್ದಳು. ಸಟ್ಟುಗ ಬಿಸಿ ಮಾಡಿ ಮೈಮೇಲೆಲ್ಲಾ ಬರೆ ಎಳೆದಿದ್ದಳು. ನೆಲಕ್ಕುರುಳಿಸಿ ಕಾಲಿಂದ ಒದ್ದು, ಮನ ಬಂದಂತೆ ಹಲ್ಲೆ ಮಾಡಿದ್ದಳು.

Also Read  'ಮುಷ್ಕರ' ನಡೆಸಿದ್ದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ

ಸೊಸೆಯ ಅಟ್ಟಹಾಸದಿಂದ ಭಯಗೊಂಡು ಮಗ ಲಕ್ಷ್ಮಣ ಪೈ ಮನೆಯಿಂದ ಇನ್ನೊಬ್ಬ ಮಗ ರಮಾನಾಥ ಪೈ ಮನೆಗೆ ಶಿಫ್ಟ್ ಆಗಿದ್ದರು. ಈ ಸಂಬಂಧವಾಗಿ ಅವಾಚ್ಯ ಶಬ್ಧಗಳಿಂದ ನಿಂದನೆ ಮತ್ತು ಕೊಲೆಯತ್ನ ದೂರು ಮಲ್ಪೆ ಠಾಣೆಯಲ್ಲಿ ದಾಖಲಾಗಿತ್ತು.

error: Content is protected !!
Scroll to Top