ಕಡಬ: ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಿಳೆ ➤ಮಾನವೀಯತೆ ಮೆರೆದ ಪೊಲೀಸರು ಹಾಗೂ ಪತ್ರಕರ್ತರು

(ನ್ಯೂಸ್ ಕಡಬ) newskadaba.com ಕಡಬ, ಸೆ.11: ಅನಾರೋಗ್ಯ ಪೀಡಿತರಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಕಡಬದ ಮಹಿಳೆಯೊಬ್ಬರನ್ನು ಆಸ್ಪತ್ರೆಗೆ ಸೇರಿಸಲು ಕಡಬ ಪೊಲೀಸರು ಮತ್ತು ಪತ್ರಕರ್ತರೊಬ್ಬರು ತುರ್ತು ಸ್ಪಂದಿಸಿ ಮಾನವೀಯ ನೆರವು ನೀಡಿದ್ದಾರೆ.

 

 

ಕಡಬ ಸಮೀಪದ ಮಜ್ಜಗುಡ್ಡೆ ನಿವಾಸಿ ತೀರಾ ಬಡತನದಲ್ಲಿರುವ ಮಹಿಳೆಯೊಬ್ಬರು ಕಳೆದ ದಿನದಂದು ತೀರಾ ಅನಾರೋಗ್ಯಕ್ಕೆ ಒಳಗಾಗಿದ್ದರು. ಈ ವಿಚಾರವನ್ನು ಸ್ಥಳೀಯರು ಪತ್ರಕರ್ತ ನಾಗರಾಗ್‌ ಎನ್.ಕೆ ಅವರ ಗಮನಕ್ಕೆ ತಂದಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪತ್ರಕರ್ತರು ತಮ್ಮ ಆಪ್ತ ವಲಯದವರಿಗೆ ಮಾಹಿತಿ ನೀಡಿ, ಠಾಣೆಗೂ ಕರೆ ಮಾಡಿ ಸಹಕಾರ ನೀಡಿದರು. ಕೂಡಲೇ ಸ್ಪಂದಿಸಿದ ಕಡಬ ಠಾಣಾ ಎಸ್‌ ಐ ರುಕ್ಮ ನಾಯ್ಕ್‌ ಅವರು ವೈದ್ಯಾಧಿಕಾರಿಯನ್ನು ಸಂಪರ್ಕಿಸಿ ಮಾತುಕತೆ ನಡೆಸಿದಲ್ಲದೆ, ರೋಗಿಯನ್ನು ಮಜ್ಜಗುಡ್ಡೆ ಮನೆಯಿಂದ ಕಡಬ ಆಸ್ಪತ್ರೆಗೆ ಕರೆತರಲು ತನ್ನ ಸಿಬ್ಬಂದಿಗಳನ್ನು ಕಳುಹಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕಳುಹಿಸಲಾಯಿತು. ಠಾಣಾ ಸಿಬ್ಬಂದಿ ಶಿವಪ್ರಸಾದ್‌ ಮತ್ತು ಇತರರು,ಬಜರಂಗ ದಳದ ಕಾರ್ಯಕರ್ತರು ಕೈಜೋಡಿಸಿದ್ದರು. ಪೊಲೀಸ್‌ ಮತ್ತು ಪತ್ರಕರ್ತರ ಮಾನವೀಯ ನೆರವಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Also Read  ಸೆ.17- ಪುತ್ತೂರಿನಲ್ಲಿ ನೇತ್ರಾ ಪರೀಕ್ಷಾ ಶಿಬಿರ

 

error: Content is protected !!
Scroll to Top