ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಹಿನ್ನೆಲೆ ➤ ಕೆ.ಎಸ್.ಆರ್.ಟಿ.ಸಿಯಿಂದ ಉಚಿತ ಬಸ್ ಸೌಲಭ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 05. ಸೆ.7 ರಿಂದ 19ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯಲಿದ್ದು, ಈ ಹಿನ್ನೆಲೆ ಕೆ.ಎಸ್‌.ಆರ್‌.‌ಟಿ.ಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತ ಬಸ್‌ ಸೌಲಭ್ಯ ಒದಗಿಸಿದ್ದು, ಇದರ ಪ್ರಯೋಜನವನ್ನು ಪಡೆಯಲು ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ತೋರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

 

ಸೆ.7ರಂದು ಬೆಳಿಗ್ಗೆ 10.15ರಿಂದ 1.30ರವರೆಗೆ ಉರ್ದು, ಸಂಸ್ಕೃತ, 2.15ರಿಂದ 5.30ರವರೆಗೆ ಮಾಹಿತಿ ತಂತ್ರಜ್ಞಾನ, ರಿಟೇಲ್‌, ಆಟೊಮೊಬೈಲ್‌, ಹೆಲ್ತ್ ಕೇರ್‌, ಬ್ಯೂಟಿ ಮತ್ತು ವೆಲ್‌ ನೆಸ್‌, ಗೃಹ ವಿಜ್ಞಾನ, ಸೆ. 08ರಂದು ಬೆಳಿಗ್ಗೆ ಇತಿಹಾಸ, ಸಂಖ್ಯಾಶಾಸ್ತ್ರ, ಜೀವವಿಜ್ಞಾನ, ಸೆ.9ರಂದು ಬೆಳಿಗ್ಗೆ ಹಿಂದಿ, ಮಧ್ಯಾಹ್ನ ತಮಿಳು, ತೆಲುಗು, ಮಲಯಾಳ, ಮರಾಠಿ, ಅರೆಬಿಕ್‌, ಫ್ರೆಂಚ್‌, ಸೆ.10ರಂದು ಬೆಳಿಗ್ಗೆ ಇಂಗ್ಲಿಷ್‌ ಪರೀಕ್ಷೆ ನಡೆಯಲಿದೆ. ಸೆ.11ರಂದು ಬೆಳಿಗ್ಗೆ ಐಚ್ಛಿಕ ಕನ್ನಡ, ಎಲೆಕ್ಟ್ರಾನಿಕ್ಸ್‌, ಗಣಿತ ವಿಜ್ಞಾನ, ಮಧ್ಯಾಹ್ನ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಭೂಗರ್ಭ ವಿಜ್ಞಾನ, ಸೆ.12ರಂದು ಬೆಳಿಗ್ಗೆ ಅರ್ಥಶಾಸ್ತ್ರ, ಭೌತವಿಜ್ಞಾನ ಪರೀಕ್ಷೆ, ಸೆ.14ರಂದು ಬೆಳಿಗ್ಗೆ ತರ್ಕ ಶಾಸ್ತ್ರ, ವ್ಯವಹಾರ ಅಧ್ಯಯನ, ರಸಾಯನ ವಿಜ್ಞಾನ, ಶಿಕ್ಷಣ, ಸೆ.15ರಂದು ಬೆಳಿಗ್ಗೆ ಕನ್ನಡ, ಸೆ.16ರಂದು ಬೆಳಿಗ್ಗೆ ರಾಜ್ಯ ಶಾಸ್ತ್ರ, ಮೂಲ ಗಣಿತ, ಸೆ.17ರಂದು ಬೆಳಿಗ್ಗೆ ಸಮಾಜ ವಿಜ್ಞಾನ, ಲೆಕ್ಕಶಾಸ್ತ್ರ, ಗಣಿತ ಹಾಗೂ ಸೆ.18ರಂದು ಬೆಳಿಗ್ಗೆ ಭೂಗೋಳ ವಿಜ್ಞಾನ, ಮಧ್ಯಾಹ್ನ ಮನಃಶಾಸ್ತ್ರ ಪರೀಕ್ಷೆ ನಡೆಯಲಿದೆ.

Also Read  VDR Innovative Ideas For Startups

error: Content is protected !!
Scroll to Top