ಎಸ್.ಸಿ, ಎಸ್.ಟಿ.- ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 05. 2019-20ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿ, ಅಂತಿಮ ಪದವಿ, ಅಂತಿಮ ಸ್ನಾತಕೋತ್ತರ ಪದವಿಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ  ಶ್ರೇಣಿಯಲ್ಲಿ ಉತ್ತೀರ್ಣರಾದ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನಕ್ಕೆ ಅಂತರ್ಜಾಲ (ಆನ್‍ಲೈನ್) ದ ಮೂಲಕ ಅರ್ಜಿಯನ್ನು ಇಲಾಖಾ ವೆಬ್‍ಸೈಟ್ ವಿಳಾಸ  ಎಸ್.ಸಿ www.sw.kar.nic.in  ಮತ್ತು  ಎಸ್.ಟಿ www.tw.kar.nic.in ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು ಇಂತಿವೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು, ಕರ್ನಾಟಕ ರಾಜ್ಯದವರಾಗಿರಬೇಕು, ಅಂತರ್ಜಾಲದಲ್ಲಿ ಸಲ್ಲಿಸಿರುವ ಅರ್ಜಿಯನ್ನು ಪ್ರಾಂಶುಪಾಲರಿಂದ ದೃಢೀಕರಿಸಬೇಕು (2019-20ನೇ ಸಾಲಿನಲ್ಲಿ ಪಾಸಾದವರಿಗೆ ಮಾತ್ರ), ಆಯಾಯ ತಾಲೂಕಿನ ತಹಶೀಲ್ದಾರರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ದೃಢೀಕೃತ ಪ್ರತಿ (ಆರ್.ಡಿ ಸಂಖ್ಯೆಯನ್ನು ಹೊಂದಿರಬೇಕು), ಪ್ರಥಮ ಶೇಣಿಯಲ್ಲಿಯೇ ಪಡೆದಿರುವ ಮೂಲ ಅಂಕಪಟ್ಟಿಯ ದೃಢೀಕೃತ ಪ್ರತಿ, ವಿದ್ಯಾರ್ಥಿಯ ಆಧಾರ್ ಕಾರ್ಡ್ ಪ್ರತಿ, ವಿದ್ಯಾರ್ಥಿಯು ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆ ತೆರೆದಿರುವ ಪಾಸ್ ಪುಸ್ತಕದ ನಕಲು ಪ್ರತಿ. ಈ ಎಲ್ಲಾ ದಾಖಲೆಗಳನ್ನು ಆನ್‍ಲೈನ್ ಅರ್ಜಿಯೊಂದಿಗೆ ಪ್ರಾಂಶುಪಾಲರಿಂದ ದೃಢೀಕರಿಸಿ ಬಂಟ್ವಾಳ ತಾಲೂಕು ಬಿ.ಸಿ.ರಸ್ತೆ, ಸಹಾಯಕ ನಿರ್ದೇಶಕರವರ ಕಚೇರಿ(ಗ್ರೇಡ್-2), ಸಮಾಜ ಕಲ್ಯಾಣ ಇಲಾಖೆ, ಗಣೇಶ್ ಬಿಲ್ಡಿಂಗ್, 2ನೇ ಮಹಡಿ ಇಲ್ಲಿಗೆ ಸಲ್ಲಿಸಬೇಕು.
ಹೆಚ್ಚಿನ ಮಹಿತಿಗಾಗಿ ಬಂಟ್ವಾಳ ತಾಲೂಕು ಬಿ.ಸಿ.ರಸ್ತೆ, ಸಹಾಯಕ ನಿರ್ದೇಶಕರವರ ಕಚೇರಿ(ಗ್ರೇಡ್-2), ಸಮಾಜ ಕಲ್ಯಾಣ ಇಲಾಖೆ, ಗಣೇಶ್ ಬಿಲ್ಡಿಂಗ್, 2ನೇ ಮಹಡಿ, ದೂರವಾಣಿ ಸಂಖ್ಯೆ 08255-230968 ನ್ನು ಸಂಪರ್ಕಿಸುವಂತೆ ಬಂಟ್ವಾಳ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರೇಡ್-2) ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group