ಮಂಗಳೂರು : ಕರಾವಳಿ ದೇವಳಗಳಲ್ಲಿ ಸೇವೆ ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.05: ಕೋವಿಡ್-19 ಕಾರಣಕ್ಕೆ ಐದು ತಿಂಗಳುಗಳಿಂದ ಕರಾವಳಿಯ ದೇವಾಲಯಗಳಲ್ಲಿ ಸ್ಥಗಿತಗೊಂಡಿದ್ದ ಸೇವೆಗಳು ಆರಂಭ ಗೊಂಡಿವೆ. ಮುಂಜಾಗ್ರತಾ ಕ್ರಮದೊಂದಿಗೆ ಭಕ್ತರ ದಟ್ಟಣೆಯೂ ಕಂಡುಬಂತು.

 

ದ.ಕ.ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ,ಕಟೀಲು, ಮಂಗಳಾದೇವಿ, ಕದ್ರಿ, ಕುದ್ರೋಳಿ, ಪೊಳಲಿ, ಶ್ರೀ ಶರವು ಸೇರಿದಂತೆ ಬಹುತೇಕ ದೇವಾಲಯಗಳಲ್ಲಿ ಸೇವೆಗಳು ಆರಂಭಗೊಂಡಿವೆ. ಎಳೆಯ ಮಕ್ಕಳ ಉಪಸ್ಥಿತಿಯಲ್ಲಿ ನಡೆಸಬೇಕಾದ ಅನ್ನಪ್ರಾಶನ, ಅಕ್ಷರಾಭ್ಯಾಸ ಮೊದಲಾದ ಸೇವೆಗಳನ್ನು ಸದ್ಯಕ್ಕೆ ಮುಂದೂಡಲಾಗಿದೆ. ಕಟೀಲು ಕ್ಷೇತ್ರದಲ್ಲಿ ಅನ್ನಪ್ರಾಶನ ಸೇವೆ ರಶೀದಿ ಮಾಡಿಸಿದವರಿಗೆ ಅನ್ನಪ್ರಾಶನಕ್ಕೆ ನೀಡಲಾಗುವ ಗುಡಾನ್ನ ಪಾಯಸವನ್ನು ಪ್ರಸಾದವಾಗಿ ನೀಡಲಾಗುತ್ತದೆ.ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶುಕ್ರವಾರದವರೆಗೆ ಸೇವೆಗಳನ್ನು ಆರಂಭಿಸಲಾಗಿಲ್ಲ, ಈ ಕುರಿತು ಸಿದ್ಧತೆಗಳು ನಡೆದಿವೆ, ಒಂದೆರಡು ದಿನಗಳಲ್ಲಿ ಆರಂಭಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Also Read  ವರುಣನ ಅಬ್ಬರಕ್ಕೆ ತತ್ತರಿಸಿದ ಬೆಂಗಳೂರು ► ಜನಜೀವನ ಅಸ್ತವ್ಯಸ್ತ

 

 

 

ಉಡುಪಿ ಜಿಲ್ಲೆಯ ಆನೆಗುಡ್ಡೆ, ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನಗಳಲ್ಲಿ ಸೀಮಿತ ಸೇವೆಗಳನ್ನು ಆರಂಭಿಸಲಾಗಿದೆ. ಇನ್ನೂ ಕೆಲವು ದೇವಳದಲ್ಲಿ ಇನ್ನಷ್ಟೇ ನಿರ್ಧಾರವಾಗಬೇಕಿದೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಮತ್ತು ಉಡುಪಿ ಕೃಷ್ಣ ಮಠದಲ್ಲಿ ಸೇವೆಗಳನ್ನು ಆರಂಭಿಸುವ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ ಎಂದು ದೇವಳದ ಮೂಲಗಳು ತಿಳಿಸಿದೆ.

 

error: Content is protected !!
Scroll to Top