ಕಡಬದ ಮೊದಲ ಪ್ರಸ್ತಾವಿತ CBSE ಶಾಲೆಯಲ್ಲಿ ದಾಖಲಾತಿ ಆರಂಭ ➤ ಕುಂತೂರು ಮಾರ್ ಇವಾನಿಯೋಸ್ ಶಿಕ್ಷಣ ಸಂಸ್ಥೆಯ ಸಹಸಂಸ್ಥೆ ಸೈಂಟ್ ಪೌಲ್ಸ್ ಆಂಗ್ಲ ಮಾಧ್ಯಮ ಶಾಲೆ

(ನ್ಯೂಸ್ ಕಡಬ) newskadaba.com ಕಡಬ, ಸೆ.05. ತಾಲೂಕಿನ ಹೃದಯ ಭಾಗದಲ್ಲಿ ನೂತನವಾಗಿ ಆರಂಭಗೊಂಡಿರುವ, ಪ್ರಸ್ತಾವಿತ C B S E ಪಠ್ಯಕ್ರಮದ ಸೈಂಟ್ ಪೌಲ್ಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಸಕ್ತ ಸಾಲಿನ ಎಲ್.ಕೆ.ಜಿ ಹಾಗೂ ಯು.ಕೆ.ಜಿ ತರಗತಿಗಳ ದಾಖಲಾತಿ ಆರಂಭಗೊಂಡಿದೆ.

 

ಪ್ರಸ್ತುತವಾಗಿ ಆರಂಭಗೊಂಡ ಈ ಶಾಲೆಯಲ್ಲಿ ಮಕ್ಕಳ ಮುಂದಿನ ಭವಿಷ್ಯ ರೂಪಿಸುವಲ್ಲಿ ನುರಿತ ಶಿಕ್ಷಕರಿಂದ ಉತ್ತಮ ಭೋದನೆ, ಸಿಬಿಎಸ್‍ಸಿ ಪಠ್ಯಕ್ರಮ, ಮೌಲ್ಯಗಳ ಆಧಾರಿತ ಶಿಕ್ಷಣ, ಮಕ್ಕಳಿಗಾಗಿ ಸುಸಜ್ಜಿತವಾದ ಆಟದ ಮೈದಾನ, (ಕಿಡ್ಸ್ ಪಾರ್ಕ್) ಅತ್ಯಾಧುನಿಕ ತಂತ್ರಜ್ಞಾನದಿಂದ ರೂಪುಗೊಂಡಿರುವ ಮನೆಯ ವಾತಾವರಣ ನೀಡುವ ತರಗತಿ ಕೊಠಡಿಗಳು, ವಿಶೇಷವಾಗಿ ಮಕ್ಕಳ ಕಾಳಜಿ ಮತ್ತು ಆರೈಕೆಗೆ ಆಸಕ್ತ ಸಿಬ್ಬಂದಿಗಳು, ಶಾಲಾ ವಾಹನ ವ್ಯವಸ್ಥೆ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಹೊಂದಿದೆ. ಕುಂತೂರಿನ ಮಾರ್ ಇವಾನಿಯೋಸ್ ಆಂಗ್ಲ ಮಾಧ್ಯಮ ಶಾಲೆ, ಪದವಿ ಕಾಲೇಜು ಹಾಗೂ ಬಿಎಡ್ ಕಾಲೇಜಿನ ಸಹ ಸಂಸ್ಥೆಯಾಗಿರುವ ಸೈಂಟ್ ಪೌಲ್ಸ್ ವಿದ್ಯಾ ಸಂಸ್ಥೆಯು, ಪುತ್ತೂರು ಧರ್ಮಪ್ರಾಂತ್ಯದ ಅಧೀನಕ್ಕೆ ಒಳಪಟ್ಟಿದೆ. ಕಡಬದ ಮುಖ್ಯ ರಸ್ತೆಯ ಶ್ರೀ ಗಣೇಶ್ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ಶಾಲಾ ಕಛೇರಿಯಲ್ಲಿ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಮ್ಯಾನೇಜರ್ ಫಾ| ಡಾ| ಎಲ್ದೋ ಪುತ್ತನ್ ಕಂಡತ್ತಿಲ್ 9480487710, 9900938926 ಅಥವಾ ಕಛೇರಿಯ ಕಾರ್ಯದರ್ಶಿ 6364667255 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Also Read  ಹಾಡಹಗಲೇ ಗೂಡಂಗಡಿಗೆ ನುಗ್ಗಿ ಸೊತ್ತುಗಳ ಕಳ್ಳತನ► ಸಾರ್ವಜನಿಕರ ಸಹಾಯದಿಂದ ಆರೋಪಿಗಳ ಬಂಧನ

 

error: Content is protected !!
Scroll to Top