ಉಪ್ಪಿನಂಗಡಿ: ಎಸ್.ಡಿ.ಪಿ.ಐ ವಲಯ ಸಮಿತಿ ಅಧೀನದ ಗಡಿಯಾರ ಎಂಬಲ್ಲಿ ಪಕ್ಷಕ್ಕೆ ಸೇರ್ಪಡೆ ಮತ್ತು ಹೊಸ ಬ್ರಾಂಚ್ ರಚನೆ

(ನ್ಯೂಸ್ ಕಡಬ) newskadaba.com  ಉಪ್ಪಿನಂಗಡಿ, ಸೆ. 05. ಬಿಳಿಯೂರು ಬ್ರಾಂಚ್ ವತಿಯಿಂದ ಹಲವಾರು ಕಾರ್ಯಕರ್ತರು ಎಸ್‌.ಡಿ.ಪಿ.ಐ ಪಕ್ಷಕ್ಕೆ ಸೇರ್ಪಡೆ ಗೊಳ್ಳುವ ಕಾರ್ಯಕ್ರಮವು ನಡೆಯಿತು. ಎಸ್‌.ಡಿ.ಪಿ.ಐ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿಕೊಂಡು ಹಲವಾರು ಕಾರ್ಯಕರ್ತರು ಪಕ್ಷದ ಧ್ವಜವನ್ನು ಸ್ವೀಕರಿಸುವ ಮೂಲಕ ಪಕ್ಷಕ್ಕೆ ಸೇರ್ಪಡೆಗೊಂಡರು ಮತ್ತು ಎಸ್‌ಡಿಪಿಐ ಉಪ್ಪಿನಂಗಡಿ ವಲಯ ಸಮಿತಿಯ ಅಧೀನದಲ್ಲಿ ಹೊಸ ಗಡಿಯಾರ ಬ್ರಾಂಚ್ ರಚಿಸಲಾಯಿತು.

ಕಾರ್ಯಕ್ರಮದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಕೋಶಾಧಿಕಾರಿ ಇಕ್ಬಾಲ್ ಕೆಂಪಿ ಅಧ್ಯಕ್ಷತೆ ವಹಿಸಿದ್ದರು ಮತ್ತು ಪಕ್ಷದ ನಿಬಂಧನೆಗಳನ್ನು ವಿವರಿಸಿದರು.

ಉಪ್ಪಿನಂಗಡಿ ವಲಯದ ನಿಕಟ ಪೂರ್ವ ಅಧ್ಯಕ್ಷರಾದ ಅಬ್ದುಲ್ ರಝಾಕ್ ಸೀಮಾರವರು ಪಕ್ಷದ ತತ್ವ ಸಿದ್ದಾಂತಗಳನ್ನು ವಿವರಿಸಿದರು. ಗಡಿಯಾರ ಬ್ರಾಂಚ್ ನ ನೂತನ ಅಧ್ಯಕ್ಷರಾಗಿ ನಿಸಾರ್, ಉಪಾಧ್ಯಕ್ಷರಾಗಿ ಸಮೀರ್  ಕಾರ್ಯದರ್ಶಿಯಾಗಿ ಇಮ್ರಾನ್ ಗಡಿಯಾರ, ಜೊತೆ ಕಾರ್ಯದರ್ಶಿ ಇರ್ಷಾದ್, ಕೋಶಾಧಿಕಾರಿಯಾಗಿ ನವಾಝ್ ರವರನ್ನು ಆಯ್ಕೆ ಮಾಡಲಾಯಿತು. ಪದಾಧಿಕಾರಿಗಳಾಗಿ ಹುಸೈನ್, ಸಿನಾನ್, ಝುಬೈರ್, ಯಾಸೀರ್, ಹುನೈಸ್ ಮತ್ತು ಇಕ್ಬಾಲ್ ರವರನ್ನು ಆರಿಸಲಾಯಿತು. ಉಪ್ಪಿನಂಗಡಿ ವಲಯ ಕಾರ್ಯದರ್ಶಿ ಅಬ್ದುಲ್ಲಾ ಸ್ವಾಗತಿಸಿ ಇಮ್ರಾನ್ ವಂದಿಸಿದರು.

 

Also Read  ಪ್ರೇಮಿಗಳ ದಿನಕ್ಕೆ ಕೇಂದ್ರ ಸರಕಾರ ರಜೆ ಘೋಷಿಸಲು ವಾಟಾಳ್ ನಾಗರಾಜ್ ಆಗ್ರಹ ► ಕುರಿಗಳಿಗೆ ಮದುವೆ ಮಾಡುವ ಮೂಲಕ 'ವ್ಯಾಲೆಂಟೈನ್ಸ್ ಡೇ' ಆಚರಣೆ

 

error: Content is protected !!
Scroll to Top