(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 05: ಕಳೆದ ಶುಕ್ರವಾರ ಕೊರೋನ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿದ್ದ ಸುಳ್ಯ ಶಾಸಕ ಎಸ್.ಅಂಗಾರರು ಇಂದು ಮತ್ತೆ ಕೊರೋನ ಪರೀಕ್ಷೆ ನಡೆಸಿದ್ದು, ವರದಿ ನೆಗೆಟಿವ್ ಬಂದಿರುವುದಾಗಿ ತಿಳಿದುಬಂದಿದೆ. ಅವರು ಒಂದು ವಾರಗಳ ಕಾಲ ಕ್ವಾರಂಟೈನ್ ನಲ್ಲಿದ್ದರು. ಅವರ ಪತ್ನಿ ಮತ್ತು ಕಾರು ಚಾಲಕನನ್ನು ಕೂಡ ಪರೀಕ್ಷೆ ಮಾಡಲಾಗಿದ್ದು ಅವರ ವರದಿಯೂ ಕೂಡ ನೆಗೆಟಿವ್ ಬಂದಿರುವುದಾಗಿ ತಿಳಿದುಬಂದಿದೆ.
ಸುಳ್ಯ: ಶಾಸಕ ಎಸ್.ಅಂಗಾರರಿಗೆ ಕೊರೋನಾ ನೆಗೆಟಿವ್
