ಹಿಂದೂ ಜಾಗರಣ ವೇದಿಕೆ ಪಂಜ ವಲಯದ ಘಟಕ ಅಧ್ಯಕ್ಷರಾಗಿ ವಾಸುದೇವ ಕೆರೆಕ್ಕೋಡಿ ಆಯ್ಕೆ

(ನ್ಯೂಸ್ ಕಡಬ) newskadaba.com ಪಂಜ, ಸೆ. 05: ಹಿಂದೂ ಜಾಗರಣ ವೇದಿಕೆ ಪಂಜ ವಲಯ, ಕೇನ್ಯ ಘಟಕ ಇದರ ಶ್ರೀ ಮಹಾವಿಷ್ಣು ಶಾಖೆಯು ಇಂದು ಸುಬ್ರಹ್ಮಣ್ಯ ಕೆ.ಬಿ.ಕಣ್ಕಲ್‌ ಇವರ ಮನೆಯಲ್ಲಿ ರಚನೆಯಾಯಿತು.

 

 

ಈ ನೂತನ ಘಟಕದ ಗೌರವಾಧ್ಯಕ್ಷರಾಗಿ ರಾಜೀವ್‌ ಗೌಡ ಕಣ್ಕಲ್‌, ಅಧ್ಯಕ್ಷರಾಗಿ ವಾಸುದೇವ ಕೆರೆಕ್ಕೋಡಿ,ಉಪಾಧ್ಯಕ್ಷರಾಗಿ ವಿನ್ಯಾಸ್‌ ರೈ, ಪ್ರಧಾನ ಕಾರ್ಯದರ್ಶಿಯಾಗಿ ದೇವಿಪ್ರಸಾದ್‌. ಆನೆಮನೆ ಕಾರ್ಯದರ್ಶಿಗಳಾಗಿ ಪ್ರವೀಣ್‌ ಗೆಜ್ಜೆ, ಸುರೇಶ್‌ ನೆಲ್ಯಡ್ಕ, ಸಂಪರ್ಕ ಪ್ರಮುಖ ವಾಸುದೇವ ಆನೆಮನೆ, ಹಿಂದೂ ಯುವವಾಹಿನಿ ಪ್ರಮುಖರಾಗಿ ಪದ್ಮನಾಭ ಕೆರೆಕ್ಕೋಡಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಸುಂದರ ಗೌಡ ಕೆನಾಜೆ, ರಘುನಾಥ ರೈ, ಹಾಗೂ ಹಿಂದು ಜಾಗರಣ ವೇದಿಕೆ ಪುತ್ತೂರು ಇದರ ಸಂಪರ್ಕ ಪ್ರಮುಖರಾದ ನರಸಿಂಹ ಮಾಣಿ, ಹಿಂದೂ ಜಾಗರಣ ವೇದಿಕೆ ಪುತ್ತೂರು ತಾಲೂಕು ಇದರ ಸಂಪರ್ಕ ಪ್ರಮುಖ ದಿನೇಶ್‌, ಮತ್ತು ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು ಇದರ ಅಧ್ಯಕ್ಷರಾದ ಮಹೇಶ್‌ ಉಗ್ರಾಣಿಮನೆ, ಪ್ರದಾನ ಕಾರ್ಯದರ್ಶಿ ಸಂತೋಷ್‌ ನಾಯಾಕ್‌ ಕೊಡಿಯಾಲ, ಪ್ರಚಾರ ಪ್ರಮುಖ ಚಂದು ಕೊಡಿಯಾಲ ಉಪಸ್ಥಿತರಿದ್ದರು. ಹಾಗೂ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

Also Read  ಮಂಗಳೂರು: ಅಕ್ರಮ ಚಿನ್ನ ಸಾಗಾಟಕ್ಕೆ ಮಗುವನ್ನು ಬಳಸಿಕೊಂಡ ತಂದೆ.!

 

 

error: Content is protected !!
Scroll to Top