ಧರ್ಮಸ್ಥಳದಿಂದ ಶಿಕ್ಷಣ ಕ್ಷೇತ್ರಕ್ಕೆ 17 ಕೋಟಿ ರೂ. ಸಹಕಾರ

(ನ್ಯೂಸ್ ಕಡಬ) newskadaba.com ಧರ್ಮಸ್ಥಳ, ಸೆ.05:  ವಿದ್ಯಾಕ್ಷೇತ್ರಕ್ಕೆ ಧರ್ಮಸ್ಥಳದಿಂದ ಪ್ರೋತ್ಸಾಹ ನೀಡುತ್ತಾ ಬರಲಾಗಿದೆ.ಈ ಬಾರಿ ವಿದ್ಯಾಸಂಸ್ಥೆಗಳಿಗೆ ಕೊಡುವ ಸಹಕಾರದಲ್ಲಿ ವಿಶೇಷವಾಗಿ ಬೆಂಚು-ಡೆಸ್ಕ್ ಗಳನ್ನು ತಯಾರಿಸಿ ಕೊಡಲಾಗುತ್ತಿದೆ. ಮರದ ಬಳಕೆ ಇಲ್ಲದೆ ಸಿಮೆಂಟ್ ಮತ್ತು ತೆಂಗಿನ ಮರದ ಕಾಂಡದಿಂದ ತಯಾರಿಸಲಾದ ಪರಿಸರ ಸ್ನೇಹಿ ಬೆಂಚು-ಡೆಸ್ಕ್ ಗಳನ್ನು 1990 ನೇ ಇಸವಿಯಿಂದ ಇದುವರೆಗೆ ಕರ್ನಾಟಕ ರಾಜ್ಯದ 9645 ಸರ್ಕಾರಿ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಫಾರಸಿನೊಂದಿಗೆ 17 ಕೋಟಿ ರೂ. ಮೌಲ್ಯದ ಬೆಂಚು-ಡೆಸ್ಕ್ ಗಳನ್ನು ನೀಡಲಾಗಿದೆ.

 

ಈ ವರ್ಷದ ಬಜೆಟ್‍ನಲ್ಲಿ ಇದಕ್ಕಾಗಿ ಒಂದು ಕೋಟಿ ರೂ. ನಿಗದಿಪಡಿಸಲಾಗಿದೆ. ಶ್ರದ್ಧೆಯ ವಿದ್ಯಾದಾನ ನಡೆಸಿ: ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಅಧ್ಯಾಪಕರಿಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅಭಿನಂದನೆಗಳನ್ನು ತಿಳಿಸಿದರು. ಕೊರೊನಾ ಮುಕ್ತ ಮುಂದಿನ ದಿನಗಳಲ್ಲಿ ಹೆಚ್ಚಿನ ಶ್ರದ್ಧೆಯಿಂದ ವಿದ್ಯಾದಾನ ಮಾಡುವಂತೆ ಸಂದೇಶವನ್ನು ನೀಡಿ ಎಲ್ಲರಿಗೂ ಶುಭ ಹಾರೈಸಿದ್ದಾರೆ.

Also Read  ನಟ ನಾಗಭೂಷಣ್ ಅವರ ಕಾರು ಢಿಕ್ಕಿ- ಮಹಿಳೆ ಮೃತ್ಯು

 

error: Content is protected !!
Scroll to Top