ಎರಡು ವರ್ಷಗಳಿಂದ ನಾಪತ್ತೆಯಾಗಿದ್ದ ಹುಡುಗ ಮರಳಿ ಮನೆಗೆ

(ನ್ಯೂಸ್ ಕಡಬ) newskadaba.com  ಕೊಪ್ಪಳ, ಸೆ.05. ತಂದೆಯು ಆಟ ಕಡಿಮೆ ಮಾಡಿ, ಪಾಠದ ಕಡೆಗೆ ಗಮನ ಕೊಡು ಎಂದಿದಕ್ಕೆ ಮನೆಯನ್ನೇ  ಬಿಟ್ಟು ಹೋಗಿದ್ದ ಮಗನ ಕುರಿತು ಹೆತ್ತವರು ಪೊಲೀಸ್ ಸ್ಟೇಷನ್ನಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇದೀಗ ಎರಡು ವರ್ಷಗಳ ನಂತರ ನಾಪತ್ತೆಯಾಗಿದ್ದ ಮಗನನ್ನು ಪೊಲೀಸರು ಮತ್ತೆ ಹೆತ್ತವರ ಬಳಿ ತಲುಪಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

 

ಮಹಮ್ಮದ್ ಫಯಾಜ್ ಎಂಬ ಹುಡುಗ 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ. ಈತ ಪ್ರತಿಭಾವಂತನಾಗಿದ್ದು, ಮಗನ ಮೇಲೆ ಅಪಾರ ಭರವಸೆ ಹೊಂದಿದ್ದ ತಂದೆಯು ಮಗನನ್ನು ಜಾಸ್ತಿ ಸಮಯ ಕ್ರಿಕೆಟ್ ಗ್ರೌಂಡ್ ನಲ್ಲಿ ನೋಡಿದ್ದಕ್ಕೆ ಆಟ ಕಡಿಮೆ ಮಾಡಿ, ಪಾಠದ ಕಡೆ ಗಮನ ಕೊಡು ಎಂದು ಬುದ್ಧಿ ಮಾತು ಹೇಳಿದ್ದರು. ಇದರಿಂದ ಬೇಸತ್ತ ಫಯಾಝ್ ಮನೆ ಬಿಟ್ಟು ಬೆಂಗಳೂರಿಗೆ ಹೋಗಿದ್ದ. ಫಯಾಜ್ ನಾಪತ್ತೆಯಾಗಿರುವ ಕುರಿತು ಪೋಷಕರು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ 2018ರಲ್ಲಿ ನಾಪತ್ತೆ ಪ್ರಕರಣ  ದಾಖಲಿಸಿ ಮಗನಿಗಾಗಿ ಕಾಯುತ್ತಲೇ ಇದ್ದರು. ಮೊದಲಿಗೆ ಮಿಸ್ಸಿಂಗ್ ಕಂಪ್ಲೇಂಟ್ ಪಡೆದ ಪೊಲೀಸರು, ಹಣ ಇರೋವರೆಗೂ ಸುತ್ತಾಡ್ತಾನೆ. ಆಮೇಲೆ ಅವನೇ ಮನೆಗೆ ಬರ್ತಾನೆ ಎಂದಿದ್ದರು. ನಾವೂ ಕೂಡಾ ಆತನನ್ನು ಪತ್ತೆ ಮಾಡ್ತೀವಿ ಎಂದು ಭರವಸೆ ನೀಡಿದ್ದರು. ಆದರೆ ಮಹಮ್ಮದ್ ಫಯಾಜ್ ಎರಡು ವರ್ಷಗಳಾದರೂ ಪತ್ತೆಯಾಗದ್ದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಹುಡುಕಾಟ ಕೆಲಸ ಶುರು ಮಾಡಿದಾಗ ಬೆಂಗಳೂರಿನಲ್ಲಿ ಫಯಾಜ್ ಇರುವುದನ್ನು ಪತ್ತೆ ಹಚ್ಚಿ, ಕರೆದುಕೊಂಡು ಬಂದು ಹೆತ್ತವರ ಮಡಿಲಿಗೆ ಹಾಕಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Also Read  ನೆಲ್ಯಾಡಿ: ಕಣ್ಣೀರಾದ ಕುಡಿಯುವ ನೀರು..! ➤ ಮನವಿಗೆ ಕ್ಯಾರೇ ಅನ್ನದ ಅಧಿಕಾರಿಗಳು

error: Content is protected !!
Scroll to Top