ಮೂಡುಬಿದಿರೆ: ದೇವಕಿ ಪ್ರಸನ್ನ ಜಿ.ಎಸ್. ಅವರಿಗೆ ಡಾಕ್ಟರೇಟ್‌ ಪದವಿ

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಸೆ. 05: ಮೂಡುಬಿದಿರೆ ಆಳ್ವಾಸ್‌ ಕಾಲೇಜಿನ ಹಿಂದಿ ಉಪನ್ಯಾಸಕಿ ದೇವಕಿ ಪ್ರಸನ್ನ ಜಿ.ಎಸ್.‌ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್‌ ಪದವಿ ಪಡೆದಿದ್ದಾರೆ.

 

 

“ಮಧು ಕಾಂಕರಿಯಾ ಕೆ ಕಥಾ ಸಾಹಿತ್ಯ ಮೆ ಮಾನವೀಯ ಸಂವೇದನಾ” ಎನ್ನುವ ವಿಷಯದ ಬಗ್ಗೆ ಡಾ.ಪ್ರಭಾ.ವಿ.ಭಟ್‌ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ, ದೇವಕಿ ಪ್ರಸನ್ನ ಅವರು ಪ್ರಬಂಧ ಮಂಡಿಸಿದ್ದರು. ಅವರು ಪುತ್ತೂರಿನ ಕ್ಯಾಂಪ್ಕೋ ಉದ್ಯೋಗಿ ಸಂತೋಷ್‌ ಕುಮಾರ್‌ ಅವರ ಪತ್ನಿ ಹಾಗೂ ಸುಳ್ಯ ಕೇರ್ಪಳದ ನಿವೃತ್ತ ಶಿಕ್ಷಕ ಜಿ. ಶಂಕರನಾರಾಯಣ ಮತ್ತು ವಿಜಯಲಕ್ಷ್ಮಿ ಅವರ ಪುತ್ರಿ.

Also Read  ಮಂಗಳೂರು ಮಹಾನಗರ ಪಾಲಿಕೆಗೆ ನೂತನ ಕಮಿಷನರ್ ಆಗಿ ಯುವ IAS ಅಧಿಕಾರಿ ಅಕ್ಷಯ್ ಶ್ರೀಧರ್ ನೇಮಕ

 

 

error: Content is protected !!
Scroll to Top