ಕೊಯಿಲ ಫಾರ್ಮ್ ಪ್ರವೇಶಕ್ಕೆ ನಿಷೇಧ ಹೇರಿ ಆದೇಶ

(ನ್ಯೂಸ್ ಕಡಬ) newskadaba.com ಕಡಬ:. ಸೆ.05:  ಉಪ್ಪಿನಂಗಡಿ ಕಡಬ ರಾಜ್ಯ ಹೆದ್ದಾರಿಯ ರಾಮಕುಂಜ ಸಮೀಪದ ಕೊಯಿಲ ಫಾರ್ಮ್ ಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆ ಆದೇಶ ಹೊರಡಿಸಿದೆ. ಹಚ್ಚಹಸಿರಾಗಿ ಭೂಮಾತೆಯ ಮಡಿಲಲ್ಲಿ ಕಂಗೊಳಿಸುತ್ತಿದ್ದ ಕೊಯಿಲ ಫಾರ್ಮ್ ಗೆ ಸಾರ್ವಜನಿಕರು ಪ್ರವಾಸಿಗರು ಭೇಟಿ ನೀಡಿ ತ್ಯಾಜ್ಯಗಳನ್ನು ಎಸೆದು ವಾಪಾಸ್ಸಗುತ್ತಿದ್ದರು. ಇದರಿಂದ ಗೋವುಗಳು ಮೇವಿನ ವೇಳೆ ತ್ಯಾಜ್ಯಗಳನ್ನು ತಿಂದು ಆರೋಗ್ಯದಲ್ಲಿ ಏರುಪೇರಾಗಿತ್ತು.

ಇದರಿಂದಾಗಿ ಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಪಶುಸಂಗೋಪಾನ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕರ ಕಚೇರಿ ಮತ್ತು ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರವನ್ನು ಹೊಂದಿರುವ ಸುಮಾರು 7ಂ4 ಎಕರೆಯ ಕೊಯಿಲ ಫಾರ್ಮ್ ಮಳೆಗಾಲ ಪ್ರಾರಂಭವಾದಗ ಹಚ್ಚಹಸಿರಿನಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಈ ಸ್ಥಳದ ವಿಡಿಯೋ ಗಳು ಚಿತ್ರಗಳು ಬಾರಿ ವೈರಲ್ ಆದ ಪರಿಣಾಮ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಪ್ರತಿದಿನ ಸಾವಿರಾರು ಪ್ರವಾಸಿಗಳು ಭೇಟಿ ನೀಡುತ್ತಿದ್ದರು. ಫೋಟೋ ಶೂಟ್ ಗಳನ್ನು ಮಾಡುತ್ತಿದ್ದರು. ಸದ್ಯಕ್ಕೆ ಪಶು ಸಂಗೋಪಾನಾ ಇಲಾಖೆಗೊಳಪಟ್ಟ ಈ ಸ್ಥಳದಲ್ಲಿ 110 ಕೋಟಿ ರೂ ವೆಚ್ಚದಲ್ಲಿ ಪಶು ವೈದ್ಯಕೀಯ ಕಾಲೇಜು ನಿರ್ಮಾಣವಾಗುತ್ತದೆ.

Also Read  ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಹೆಸರಿನಲ್ಲಿ ವಿದ್ಯಾರ್ಥಿಯ ಕಿಡ್ನಾಪ್, ಹಲ್ಲೆ; 9 ಮಂದಿಯ ವಿರುದ್ದ FIR

error: Content is protected !!
Scroll to Top