ಪೂಜೆ ಸೇವೆಗಳು ಆರಂಭ ➤ ಕಟೀಲಿನಲ್ಲಿ ಭಕ್ತರ ಸಂಖ್ಯೆ ಹೆಚ್ಚಳ

(ನ್ಯೂಸ್ ಕಡಬ) newskadaba.com ಮೂಲ್ಕಿ ,ಸೆ.05:  ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಎರಡು ದಿನಗಳಿಂದ ಎಲ್ಲ ಸೇವೆಗಳು ನಿಯಮಿತವಾಗಿ ಆರಂಭವಾಗಿವೆ. ದೇವಿಗೆ ವಿಶೇಷ ದಿನವಾದ ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದರು.

 

ಕೋವಿಡ್-19 ನಿಯಮ ಪಾಲನೆಯೊಂದಿಗೆ, ದುರ್ಗಾ ನಮಸ್ಕಾರ, ಹೂವಿನ ಪೂಜೆ ಸೇರಿದಂತೆ ಎಲ್ಲ ಸೇವೆಗಳೂ ನಡೆಯುತ್ತಿವೆ. ಸಾಂಕ್ರಾಮಿಕ ಕಾಯಿಲೆ ನಿಯಂತ್ರಣದ ಉದ್ದೇಶದಿಂದ ವೃದ್ಧರು, 10 ವರ್ಷದೊಳಗಿನ ಮಕ್ಕಳಿಗೆ ದೇವಳ ಪ್ರವೇಶ ನಿಷೇಧ ನಿಯಮ ಮುಂದುವರಿಯಲಿದೆ. ‘ದಿನಕ್ಕೆ ಐದು ರಂಗಪೂಜೆ ಸೇವೆಗೆ ಮಾತ್ರ ಅವಕಾಶ ನೀಡಲಾಗಿದೆ. ಹಣ್ಣು-ಕಾಯಿ ಸೇವೆ ಸದ್ಯಕ್ಕೆ ಪ್ರಾರಂಭಗೊಂಡಿಲ್ಲ. ಭಕ್ತರು ಬಾಟಲಿ ತಂದಲ್ಲಿ ತೀರ್ಥ ನೀಡಲಾಗುತ್ತದೆ. ಮಕ್ಕಳ ಅನ್ನಪ್ರಾಶನ ಸೇವೆಗೆ ಅವಕಾಶ ಕಲ್ಪಿಸಲಾಗಿಲ್ಲ. ಅಕ್ಷರಾಭ್ಯಾಸ ಸಂಸ್ಕಾರ ಸೇವೆ ಪ್ರಾರಂಭವಾಗಿಲ್ಲ’ ಎಂದು ದೇವಳದ ಪ್ರಮುಖರು ತಿಳಿಸಿದ್ದಾರೆ. ‘ವಾಹನ ಪೂಜೆ ನಡೆಯುತ್ತದೆ. ದೇವಳ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ, ಸರದಿಯಂತೆ, ಏಕಕಾಲದಲ್ಲಿ ಒಂದೇ ಮದುವೆ ನಡೆಸಲು ಅವಕಾಶವಿದೆ. ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

Also Read  ಆಯತಪ್ಪಿ ಸಮುದ್ರಕ್ಕೆ ಬಿದ್ದು  ಮೀನುಗಾರ ಮೃತ್ಯು..!

 

error: Content is protected !!
Scroll to Top