ಕಡಬ : ನಾಪತ್ತೆಯಾಗಿದ್ದ ಅತಿಥಿ ಶಿಕ್ಷಕಿ ಮದುವೆಯಾಗಿ ಪತ್ತೆ.

(ನ್ಯೂಸ್ ಕಡಬ) newskadaba.com ಕಡಬ. ಸೆ.05:  ಆಗಸ್ಟ್ 31 ರಂದು ಶಾಲೆಗೆ ತೆರಳಿ ವಾಪಸ್ ಮನೆಗೆ ಬಾರದೇ ನಾಪತ್ತೆಯಾಗಿದ್ದ ಕಡಬ ತಾಲೂಕಿನ ಬಲ್ಯ ಶಾಲೆಯ ಅತಿಥಿ ಶಿಕ್ಷಕಿ ಪ್ರಿಯಕರನ ಜೊತೆ ವಿವಾಹವಾಗಿ ಪತ್ತೆಯಾಗಿದ್ದಾರೆ.

 

ಇವರಿಗೆ ಬೆಂಗಳೂರಿನ ಬಸವೇಶ್ವರ ನಗರದ ವ್ಯಕ್ತಿಯೊಂದಿಗೆ 3 ತಿಂಗಳ ಹಿಂದೆ ಕನ್ನಡ ಮ್ಯಾಟ್ರಿಮೋನಿ ಮೂಲಕ ಪರಿಚಯವಾಗಿತ್ತು. ಇವರ ಪರಿಚಯ ಪ್ರೇಮಕ್ಕೆ ತಿರುಗಿ ಸೆಪ್ಟಂಬರ್ 1 ರಂದು ವಿವಾಹವಾಗಿದ್ದಾರೆ. ಕಡಬ ಠಾಣೆಯ ಪಿ ಎಸ್ ವೈ ರುಕ್ಮನಾಯ್ಕ್ ಅವರ ಮಾರ್ಗದರ್ಶನದಲ್ಲಿ ಹೆಚ್ ಸಿ ಹರೀಶ್ ಪುಣ್ಚಪ್ಪಾಡಿ ಅವರು ಈಕೆಯನ್ನು ಪತ್ತೆ ಮಾಡಿ ಆಕೆಯ ಗಂಡನ ಜೊತೆ ಕಳುಹಿಸಿ ಕೊಟ್ಟಿದ್ದಾರೆ.

Also Read  ಇಂದು ಪ್ರಿಯಾಂಕಾ ಗಾಂಧಿ ಸಂಸದರಾಗಿ ಪ್ರಮಾಣ ವಚನ ಸ್ವೀಕಾರ

 

error: Content is protected !!
Scroll to Top