(ನ್ಯೂಸ್ ಕಡಬ) newskadaba.com ಮೈಸೂರು, ಸೆ. 04: ರಿಮೋಟ್ ಶೆಲ್ ಅನ್ನು ನುಂಗಿ ಮಗುವೊಂದು ಸಾವಿಗೀಡಾಗಿರುವ ಘಟನೆ ಮೈಸೂರು ನಗರದ ಇಟ್ಟಿಗೆಗೂಡಿನಲ್ಲಿ ನಡೆದಿದೆ. ರಿಮೋಟ್ ಶೆಲ್ ನುಂಗಿ ಮೃತಪಟ್ಟ ಮಗುವನ್ನು ಚೆಲುವರಾಜ್ ಎಂಬುವವರ ಒಂದೂವರೆ ವರ್ಷದ ಮಗ ಹೇಮಂತ್ ಎಂದು ಗುರುತಿಸಲಾಗಿದೆ.

ಮನೆಯಲ್ಲೇ ರಿಮೋಟ್ ನೊಂದಿಗೆ ಆಟವಾಡಿಕೊಂಡಿದ್ದ ಮಗು ಗುರುವಾರ ಸಂಜೆ ಅಕಸ್ಮಿಕವಾಗಿ ರಿಮೋಟ್‌ನೊಳಗಿದ್ದ ಶೆಲ್ ನ್ನು ನುಂಗಿದೆ. ಅಸ್ವಸ್ಥಗೊಂಡ ಮಗುವನ್ನು ಕೂಡಲೇ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಉಸಿರಾಡಲು ಕಷ್ಟಪಡುತ್ತಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದೆ.ಮಗು ಕಳೆದುಕೊಂಡ ಪೋಷಕರ, ಕುಟುಂಬಸ್ಥರ ಗೋಳು ಮುಗಿಲು ಮುಟ್ಟಿದೆ. ಈ ಸಂಬಂಧ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.









