ಪಂಜ: ದೇವಿಪ್ರಾಸಾದ್‌ ಚಿಕ್ಮುಳಿಯರಿಗೆ ಸಾಧನಾಶ್ರೀ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಪಂಜ, ಸೆ. 04: ಜೇಸಿಐ ಪಂಜ ಪಂಚಶ್ರೀಯ ಕಾರ್ಯದರ್ಶಿ, ಯುವ ಉದ್ಯಮಿ, ಗುತ್ತಿಗಾರಿನ ದೇವಿ ಸಿಟಿ ಕಾಂಪ್ಲೆಕ್ಸ್‌ ನ ಮಾಲಕ ಜೇಸೀ ಜೆಎಫ್‌ಎಂ ದೇವಿಪ್ರಾಸಾದ್‌ ಚಿಕ್ಮುಳಿವಯರಿಗೆ ಜೇಸಿಐ ಭಾರತದ ವಲಯ 15ರ ವಿಭಾಗದ ಅಭಿವೃದ್ಧಿ, ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ನೀಡುವ ಸಾಧನಾಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

 

ವ್ಯವಹಾರ ಅಥವಾ ವೃತ್ತಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿ ಜೇಸೀ ಘಟಕದ ಓರ್ವ ಸದಸ್ಯರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಪಂಜ ಜೇಸಿಐ ಘಟಕದಿಂದ ಇವರು ಆಯ್ಕೆಯಾಗಿರುತ್ತಾರೆ. ಸೆ.06 ರಂದು ಬಂಟ್ವಾಳದ ಬಂಟರ ಭವನದಲ್ಲಿ ನಡೆಯುವ ಅದ್ವಿತೀಯ ವ್ಯವಹಾರ ಸಮ್ಮೇಳನ 2020 ರಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

Also Read  ಉಡುಪಿ: ಯುವಕರ ಜೊತೆ ಕ್ರಿಕೆಟ್ ಆಡಿದ ಜಿಲ್ಲಾಧಿಕಾರಿ ಜಿ.ಜಗದೀಶ್

 

 

error: Content is protected !!
Scroll to Top