ಕಡಬ: ವಲಸೆ ಹಕ್ಕಿ ಸಮೂಹಕ್ಕೆ ಪಟಾಕಿ ಎಸೆದ ಕಿಡಿಗೇಡಿಗಳು

(ನ್ಯೂಸ್ ಕಡಬ) newskadaba.com ಕಡಬ, ಸೆ. 04: ಕಡಬ ಪೊಲೀಸ್‌ ಠಾಣೆ ಸಮೀಪ ಮರದಲ್ಲಿ ಗುಂಪಾಗಿ ವಾಸವಿರುವ ವಲಸೆ ಹಕ್ಕಿ ಸಮೂಹಕ್ಕೆ ಇಂದು (ಗುರುವಾರ) ಕಿಡಿಗೇಡಿಗಳು ಪಟಾಕಿ ಎಸೆದು ವಿಕೃತಿ ಮೆರೆದಿದ್ದಾರೆ.

 

 

ಕಡಬದ ಮಾಡ ದೈವಸ್ಥಾನದ ಮುಂಭಾಗದಲ್ಲಿ ಈ ಮರವಿದ್ದು ಅಧಿಕ ಪಟಾಕಿಗಳನ್ನು ಎಸೆದ ಪರಿಣಾಮ ಗೂಡಿನಿಂದ ಹಕ್ಕಿಗಳು ಚೆಲ್ಲಾಪಿಲ್ಲಿಯಾಗಿ ಹಾರಾಡುವ ದೃಶ್ಯ ಕಂಡುಬಂದಿದೆ. ಲೋಕೋಪಯೋಗಿ ಇಲಾಖೆಯ ರಸ್ತೆ ಮಾರ್ಜಿನ್ ನಲ್ಲಿ ಈ ಮರವಿದ್ದು ಇದರ ಕೆಳಗೆ ಕೆಲ ವ್ಯಕ್ತಿಗಳು ಅನಧಿಕೃತ ಗೂಡಂಗಡಿಗಳನ್ನು ತೆರೆದು ವ್ಯವಹಾರದಲ್ಲಿ ತೊಡಗಿದ್ದಾರೆ. ಯಾರಿಗೂ ತೊಂದರೆ ಮಾಡದೆ ತನ್ನಷ್ಟಕ್ಕೆ ಇರುವ ಹಕ್ಕಿ ಸಮೂಹಕ್ಕೆ ಪಟಾಕಿ ಎಸೆದು ಹಕ್ಕಿಗಳನ್ನು ಬದುಕಲು ಬಿಡದೆ ವಿಕೃತಿ ಮರೆದು ಸಂತೋ಼ಷ ಪಡುವವರ ಮೇಲೆ ಪೊಲೀಸ್‌ ಇಲಾಖೆ, ಅರಣ್ಯ ಇಲಾಖೆ ಕಾನೂನು ಕ್ರಮ ಜರಗಿಸುವಂತೆ ಪರಿಸರ ಪ್ರೇಮಿಗಳಿಂದ ಆಗ್ರಹ ವ್ಯಕ್ತವಾಗಿದೆ.

Also Read  ಜಲಪಾತ ವೀಕ್ಷಣೆಗೆ ಹೋಗಿದ್ದ ಯುವಕ ನೀರುಪಾಲು- ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆ

 

 

error: Content is protected !!
Scroll to Top