PSI ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ➤ ಹಣ ಕೇಳಿ ವಂಚಿಸಿದ ಕಿರಾತಕ

(ನ್ಯೂಸ್ ಕಡಬ) newskadaba.com ಕಾರವಾರ. ಸೆ.04:  ಟಿ ನಗರದ ಗ್ರಾಮೀಣ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರೇವಣಸಿದ್ದಪ್ಪ ಅವರ ಹೆಸರಿನಲ್ಲಿ ಫೇಸ್‌ಬುಕ್‌ ನಕಲಿ ಖಾತೆಯೊಂದನ್ನು ತೆರೆದು ವಂಚಿಸಿದ ಬಗ್ಗೆ ಸಿ.ಇ.ಎನ್ ಅಪರಾಧ ಠಾಣೆಯಲ್ಲಿ ಗುರುವಾರ ದೂರು ದಾಖಲಾಗಿದೆ. ಅವರ ಫೇಸ್‌ಬುಕ್ ಖಾತೆಯಿಂದ ಭಾವಚಿತ್ರ ಡೌನ್‌ಲೋಡ್ ಮಾಡಿಕೊಂಡ ಅಪರಿಚಿತ ಆರೋಪಿ, ನಕಲಿ ಖಾತೆಯನ್ನು ತೆರೆದಿದ್ದಾನೆ.

 

ಬಳಿಕ ಅವರ ಸ್ನೇಹಿತರಿಗೆ ‘ಫ್ರೆಂಡ್ ರಿಕ್ವೆಸ್ಟ್’ ಕಳುಹಿಸಿದ್ದ. ಅದನ್ನು ಸ್ವೀಕರಿಸಿದವರೊಂದಿಗೆ ‘ಮೆಸೆಂಜರ್’ ಮೂಲಕ ಮಾತಿಗೆ ಇಳಿದು, ತುರ್ತಾಗಿ  10 ಸಾವಿರ ಅಗತ್ಯವಿದೆ. ಕಳುಹಿಸಿಕೊಡುವಂತೆ ಕೇಳಿದ್ದ. ಅದನ್ನು ನಂಬಿದ ಒಬ್ಬರು 7 ಸಾವಿರವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು. ವಿಚಾರ ತಿಳಿದ ರೇವಣಸಿದ್ದಪ್ಪ ಅವರು, ಸಿ.ಇ.ಎನ್ ಅಪರಾಧ ಠಾಣೆಗೆ ದೂರು ನೀಡಿದ್ದಾರೆ. ನನ್ನ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆಯನ್ನು ತೆರೆದು ತನ್ನ ಸ್ನೇಹಿತರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಮೆಸೆಂಜರ್ ಮೂಲಕ ಚಾಟ್ ಮಾಡಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಗಮನಕ್ಕೆ ಬಂದಿದೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ನಕಲಿ ಖಾತೆ ತೆರೆದ ಖದೀಮರನ್ನು ಈಗಾಗಲೇ ತನಿಖೆ ಕೈಗೊಂಡಿದ್ದೇವೆ ಎಂದಿದ್ದಾರೆ. ಈ ಬಗ್ಗೆ ಸೈಬರ್ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಸುಬ್ರಹ್ಮಣ್ಯ: ಕುಮಾರದಾರ ನದಿಗೆ‌ ಹಾರಲೆತ್ನಿಸಿದ ವೃದ್ದ ➤ ರಕ್ಷಿಸಿದ ಬಜರಂಗದಳ ಕಾರ್ಯಕರ್ತ

 

error: Content is protected !!
Scroll to Top