ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ ➤ ಕಡಬ ತಾಲೂಕಿನ ನಾಲ್ವರು ಶಿಕ್ಷಕರು ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಸೆ. 04: 2020-21 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಕಡಬ ತಾಲೂಕಿನ ನಾಲ್ವರು ಮತ್ತು ಪುತ್ತೂರು ಮತ್ತು ಬಂಟ್ವಾಳ ತಾಲೂಕಿನ ಓರ್ವ ಶಿಕ್ಷಕ ಆಯ್ಕೆಗೊಂಡಿದ್ದಾರೆ.

ಕಡಬ ತಾಲೂಕಿನಿಂದ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕುಂಡಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಪಿ.ಎಸ್.ನಾರಾಯಣ ಮತ್ತು ಬಾನಡ್ಕ ಕಿ.ಪ್ರಾ.ಶಾಲೆಯ ಶಿಕ್ಷಕಿ ಶ್ರೀಮತಿ ಜಾನಕಿ ಪ್ರೌಢಶಾಲಾ ವಿಭಾಗದಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯ ವೆಂಕಟೇಶ್‌ ದಾಮ್ಲೆ ಮತ್ತು ಕಡಬ ಮೂಲದ ಪಂಜ ಪ್ರೌಢಶಾಲೆಯ ಶಿಕ್ಷಕ ಟೈಟನ್‌ ವರ್ಗಿಸ್‌ ರವರು ಆಯ್ಕೆಯಾಗಿದ್ದಾರೆ. ಪುತ್ತೂರು ತಾಲೂಕಿನ ಹಾರಾಡಿ ಸರಕಾರಿ ಮಾದರಿ ಉನ್ನತ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಪ್ರಶಾಂತ್‌, ಪಿ.ಎಲ್‌, ಬಂಟ್ವಾಳದ ಅಳಕೆಮಜಲು ಕಿರಿಯ ಪ್ರಾಥಮಿಕ ಶಾಲೆಯ ಇಸ್ಮಾಲಿ ರವರು ಪ್ರಶಸ್ತಿ ಆಯ್ಕೆಗೊಂಡಿದ್ದಾರೆ.

Also Read  ಭುವನೇಶ್ ಬುಡಲೂರು ಸಿ.ಎ ಪರೀಕ್ಷೆ ತೇರ್ಗಡೆ

 

 

error: Content is protected !!
Scroll to Top