(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 04: ಕರಾವಳಿ ವಿಭಾಗದಲ್ಲಿ ಮೂರು ವಿಶೇಷ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ವಿಭಾಗಕ್ಕೆ ರೈಲ್ವೆ ಮಂಡಳಿ ಅನುಮತಿ ನೀಡಿದ್ದು, ಇದರಲ್ಲಿ ಕಾರವಾರ-ಯಶವಂತ ಪುರ-ಕಾರವಾರ ರೈಲು ಕಾರ್ಯಾರಂಭಿಸಲಿದೆ.
ಸೆಪ್ಟೆಂಬರ್ 4ರ ಶುಕ್ರವಾರ ಸಂಜೆ 6.45ಕ್ಕೆ ನಂ.06585 ಯಶವಂತಪುರ ಹಾಗೂ ಕಾರವಾರ ನಡುವೆ ಕಾರ್ಯಾರಂಭಿಸಲಿದೆ. ಸೆಪ್ಟೆಂಬರ್ 5ರಂದು ಸಂಜೆ 6 ಗಂಟೆಗೆ ನಂ. 6595 ರೈಲು ಕಾರವಾರದಿಂದ ಹೊರಡಲಿದೆ. ಇನ್ನು ನಂ.16595/16596 ರೈಲುಗಳದ್ದೇ ವೇಳಾಪಟ್ಟಿ ಇವುಗಳಿಗೆ ಅನ್ವಯವಾಗಲಿದೆ. ಬೆಂಗಳೂರು-ಮಂಗಳೂರಿನ (06515) ನಡುವೆ ವಾರದಲ್ಲಿ ನಾಲ್ಕು ದಿನಗಳ ಕಾಲ ಚಲಿಸುವ ರೈಲು ಸೆಪ್ಟೆಂಬರ್ 4ರಿಂದ ಕಾರ್ಯಾಚರಣೆ ಆರಂಭಿಸಲಿದೆ. ಸೆಪ್ಟೆಂಬರ್ 6ರಿಂದ ನಂ.06516 ರೈಲು ಕಾರ್ಯಾರಂಭಿಸಲಿದೆ. ವಾರಕ್ಕೆ ಮೂರು ಬಾರಿ ಬೆಂಗಳೂರು-ಮಂಗಳೂರು ನಡುವೆ ಚಲಿಸುವ ನಂ.06517 ರೈಲು ಸೆಪ್ಟೆಂಬರ್ 6 ರಿಂದ ಆರಂಭವಾಗಲಿದ್ದು, ಮಂಗಳೂರು-ಬೆಂಗಳೂರು ನಡುವಿನ ನಂ.06518 ರ ರೈಲು ಸೆಪ್ಟೆಂಬರ್ 5 ರಿಂದ ಕಾರ್ಯಾಚರಣೆ ಆರಂಭಿಸಲಿದೆ. ಈ ವಿಶೇಷ ರೈಲುಗಳು ಮುಂದಿನ ಸೂಚನೆ ಬರುವವರೆಗೂ ಕಾರ್ಯನಿರ್ವಹಿಸಲಿದ್ದು, ಈ ರೈಲುಗಳಲ್ಲಿ ಪ್ರಯಾಣಿಸಲು ಮುಂಗಡ ಬುಕ್ಕಿಂಗ್ ಅಗತ್ಯ.