ನಾಳೆಯಿಂದ ಪಣೋಲಿಬೈಲಿನಲ್ಲಿ ಕೋಲ ಸೇವೆಗೆ ಅವಕಾಶ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ. 03. ಕೊರೋನಾ ಮಹಾಮಾರಿಯಿಂದ ಜನ ಸೇರಲು ಅವಕಾಶವಿರದ ಕಾರಣ ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುತಿದ್ದ ಸೇವೆಗಳನ್ನು ಲಾಕ್ ಡೌನ್ ಹಿನ್ನೆಲೆ ರದ್ದುಗೊಳಿಸಲಾಗಿತ್ತು. ಇದೀಗ ತಾಲೂಕಿನ ಪ್ರಸಿದ್ದ ಕಾರಣಿಕ ಕ್ಷೇತ್ರವಾಧ ಪಣೊಲಿಬೈಲಿನಲ್ಲಿ ನಾಳೆಯಿಂದ ಕೋಲ ಸೇವೆ ಆರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಶ್ರೀಕ್ಷೇತ್ರ ಪಣೋಲಿಬೈಲಿನಲ್ಲಿ ವಾರದ ಮೂರು ದಿನಗಳ ಕಾಲ ನಡೆಸಲಾಗುತ್ತಿದ್ದ ಅಗೇಲು ಸೇವೆ ಹಾಗೂ ಕೋಲ ಸೇವೆಯು ಸರಕಾರದ ನಿಯಮದಂತೆ ರದ್ದುಗೊಳಿಸಲಾಗಿತ್ತು, ಆದರೆ ಇದೀಗ ಸರಕಾರದ ಸೂಚನೆಯಂತೆ ನಾಳೆಯಿಂದ  (ಸೆ. 4) ಕೋಲ ಹಾಗೂ ಸೇವೆ ಮಾತ್ರ ಆರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

Also Read  ಆನ್ ಲೈನ್ ತರಗತಿ ಬಂದ್ ಮಾಡಿ ,ನಾಳೆ ಭಾರತ್ ಬಂದ್ ಗೆ ಬೆಂಬಲ

error: Content is protected !!
Scroll to Top