ಪ್ರವಾಸೋದ್ಯಮ: ಉಚಿತ ಕೌಶಲ್ಯ ತರಬೇತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 03. ಕರ್ನಾಟಕ ಸರ್ಕಾರ, ಪ್ರವಾಸೋದ್ಯಮ ಇಲಾಖೆ ವತಿಯಿಂದ ಕೌಶಲ್ಯ ಅಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಯೋಜನೆಯಡಿಯಲ್ಲಿ, ಅಲ್ಪಾವಧಿ ಉಚಿತ ತರಬೇತಿಯನ್ನು ಅರ್ಹ ನಿರುದ್ಯೋಗಿ ಯುವಕ, ಯುವತಿಯರಿಗೆ  ಹೋಟೆಲ್ ಮ್ಯಾನೇಜ್‍ ಮೆಂಟ್ ಕ್ಷೇತ್ರದಲ್ಲಿ ಪ್ರಾರಂಭಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹೋಟೆಲ್ ಮ್ಯಾನೇಜ್‍ ಮೆಂಟ್ ತರಬೇತಿ ಕ್ಷೇತ್ರಗಳ ವಿವರ ಇಂತಿವೆ- ಫುಡ್ ಪ್ರೊಡಕ್ಷನ್ ತರಬೇತಿ ಅವಧಿ – 18 ವಾರಗಳು, ಕನಿಷ್ಠ  ವಿದ್ಯಾರ್ಹತೆ – 8 ನೇ ತರಗತಿ ಉತ್ತೀರ್ಣ, ಸ್ಟೈಫಂಡ್ (ಷರತ್ತಿಗೊಳಪಟ್ಟು) – ರೂ. 2,000. ಬೇಕರಿ ಆ್ಯಂಡ್ ಕನ್‍ಫೆಕ್ಷನರಿ – 6 ವಾರಗಳು, ಕನಿಷ್ಠ  ವಿದ್ಯಾರ್ಹತೆ –  8 ನೇ ತರಗತಿ ಉತ್ತೀರ್ಣ, ಸ್ಟೈಫೆಂಡ್.   ರೂ 2,000.  ಫುಡ್ ಅಂಡ್ ಬೆವರೇಜ್ ಸರ್ವಿಸ್, 12 ವಾರಗಳು, 10 ನೇ ತರಗತಿ ಉತ್ತೀರ್ಣ, ಸ್ಟೈಫೆಂಡ್ ರೂ 1500. ಫ್ರೆಂಟ್ ಆಫೀಸ್ – 14 ವಾರಗಳು, 12 ನೇ ತರಗತಿ, ಸ್ಟೈಫೆಂಡ್ ರೂ 1500. ಹೌಸ್ ಕೀಪಿಂಗ್ –  12 ವಾರಗಳು, 5 ನೇ ತರಗತಿ ಉತ್ತೀರ್ಣ, ಸ್ಟೈಫೆಂಡ್ ರೂ 1500  ತರಬೇತಿಗೆ ನಿರ್ದಿಷ್ಟ ವಯೋಮಿತಿ  18 ರಿಂದ 35 ವರ್ಷದೊಳಗಿರಬೇಕು.

ತರಬೇತಿಯ ವಿಶೇಷತೆಗಳು – ತರಬೇತಿಯ ಅವಧಿಯಲ್ಲಿ ಮಧ್ಯಾಹ್ನದ ಊಟ, ಸಮವಸ್ತ್ರ ಹಾಗೂ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ  ನೀಡಲಾಗುತ್ತದೆ. ಯಶಸ್ವಿಯಾಗಿ ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಪ್ರವಾಸೋದ್ಯಮ ಇಲಾಖೆ ಹಾಗೂ ಫುಡ್ ಕ್ರಾಫ್ಟ್ ಸಂಸ್ಥೆಯಿಂದ ಜಂಟಿಯಾಗಿ ಪ್ರಮಾಣಪತ್ರ ನೀಡಲಾಗುವುದು ಮತ್ತು ಪ್ರತಿಷ್ಠಿತ ಹೋಟೆಲ್‍ಗಳಲ್ಲಿ ಕೆಲಸ ಪಡೆಯಲು ಸಹಾಯ ಮಾಡಲಾಗುತ್ತದೆ.

ಅರ್ಜಿದಾರರು ಸಲ್ಲಿಸಬೇಕಾದ ದಾಖಲೆಗಳ ವಿವರ ಇಂತಿವೆ:- ನಿಗದಿಪಡಿಸಿದ ಅರ್ಜಿ ನಮೂನೆಯಲ್ಲಿ ಇತ್ತೀಚಿನ 5 ಭಾವ ಚಿತ್ರದೊಂದಿಗೆ ಅರ್ಜಿ ಸಲ್ಲಿಸಬೇಕು, ಶೈಕ್ಷಣಿಕ ಅಂಕಪಟ್ಟಿ ಪ್ರತಿ, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಖಾತೆಯ ವಿವರ ಮತ್ತು ಆಧಾರ್ ಕಾರ್ಡ್‍ನ ಪ್ರತಿ ಲಗತ್ತಿಸಿರಬೇಕು.
ತರಬೇತಿ ನೀಡುವ ಸ್ಥಳ: ಫುಡ್ ಕ್ರಾಫ್ಟ್ ಇನ್ಸ್‍ಸ್ಟಿಟ್ಯೂಟ್, ಕನ್ನಡ ಕಾರಂಜಿ ಕಟ್ಟಡದ ಮೊದಲನೇ ಮಹಡಿ, ದಸರಾ ವಸ್ತು ಪ್ರದರ್ಶನ ಆವರಣ, ದೊಡ್ಡಕೆರೆ ಮೈದಾನ, ಇಂದಿರಾನಗರ, ಮೈಸೂರು- 570010. ಅರ್ಹ ಅಭ್ಯರ್ಥಿಗಳು, ಕಚೇರಿ ವೇಳೆಯಲ್ಲಿ ನಿಗದಿಪಡಿಸಿರುವ ಅರ್ಜಿಯನ್ನು ಪಡೆದು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಫುಡ್ ಕ್ರಾಫ್ಟ್ ಇನ್ಸ್‍ಸ್ಟಿಟ್ಯೂಟ್ ಮೈಸೂರು ದೂರವಾಣಿ ಸಂಖ್ಯೆ:  6362018821, 0821-2445388 ನ್ನು ಸಂಪರ್ಕಿಸಲು ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group