ರುಡ್ ಸೆಟ್ ನಲ್ಲಿ ಉಚಿತ ತರಬೇತಿಗಳು

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.  03. ಸ್ವ-ಉದ್ಯೋಗ ಆಕಾಂಕ್ಷಿಗಳಿಗೆ ಹಾಗೂ ಉದ್ಯೋಗವನ್ನು ಅರಸುತ್ತಿರುವವರಿಗೆ ಆಶಾಕಿರಣವಾಗಿರುವ ಉಜಿರೆಯ ರುಡ್‍ ಸೆಟ್ ಸಂಸ್ಥೆಯಲ್ಲಿ ವಿವಿಧ ತರಬೇತಿಗಳನ್ನು ಆಯೋಜಿಸಲಾಗಿದೆ. ಗ್ರಾಮೀಣ ಉದ್ಯಮಶೀಲತಾ ಅಬಿವೃದ್ಧಿ ಕಾರ್ಯಕ್ರಮ ಸೆಪ್ಟೆಂಬರ್ 10 ರಿಂದ 22  ರವರೆಗೆ, ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 04 ರವರೆಗೆ ನಡೆಯಲಿದೆ.

ಮುಂದಿನ ದಿನಗಳಲ್ಲಿ ಮೊಬೈಲ್ ಫೋನ್ ರಿಪೇರಿ, ಮಹಿಳೆಯರ ಟೈಲರಿಂಗ್, ಫೊಟೋಗ್ರಫಿ ಮತ್ತು ವಿಡಿಯೋಗ್ರಪಿ, ಸಿಸಿ ಕೆಮರಾ ಅಳವಡಿಸುವಿಕೆ, ಕೃತಕ ಆಭರಣ ತಯಾರಿಕೆ, ಪಪ್ಪಡ್, ಉಪ್ಪಿನಕಾಯಿ ಮತ್ತು ಮಸಾಲ ಪೌಡರ್ ತಯಾರಿಕೆ, ಗೃಹೋಪಯೋಗಿ ವಿದ್ಯುತ್ ಉಪಕರಣಗಳ ರಿಪೇರಿ, ಮಹಿಳೆಯರ ಬ್ಯೂಟಿ ಪಾರ್ಲರ್, ಮೋಟಾರ್ ರಿವೈಂಡಿಂಗ್, ರಬ್ಬರ್ ಟ್ಯಾಪಿಂಗ್, ಕಂಪ್ಯೂಟರ್ ಡಿ.ಟಿ.ಪಿ, ದ್ವಿ ಚಕ್ರ ವಾಹನ ರಿಪೇರಿ ಮತ್ತು ಜೇನು ಕೃಷಿ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆ. ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ತರಬೇತಿಯಲ್ಲಿ ಕೌಶಲ್ಯದ ಜೊತೆಗೆ ವ್ಯಾಪಾರ ವಹಿವಾಟು, ಸೇವಾ ಕ್ಷೇತ್ರ, ಕೈಗಾರಿಕೆ ಹಾಗೂ ಇನ್ನಿತರ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆ, ಸರಕಾರದ ಸಬ್ಸಿಡಿ ಯೋಜನೆಗಳು, ಬ್ಯಾಂಕಿನಿಂದ ದೊರೆಯುವ ಸೌಲಭ್ಯಗಳು ಹಾಗೂ ಇನ್ನಿತರ ಮಹತ್ವದ ಉದ್ಯಮಶೀಲತಾ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಲಾಗುವುದು. ಬಿಪಿಲ್ ಕಾರ್ಡುದಾರರು, ಉದ್ಯೋಗ ಖಾತ್ರಿ ಸದಸ್ಯತ್ವ ಮತ್ತು ಸರ್ಕಾರಿ ಸ್ವ -ಸಹಾಯ ಸಂಘದ ಸದಸ್ಯರುಗಳಿಗೆ ಆದ್ಯತೆ ನೀಡಲಾಗುವುದು. ತರಬೇತಿಗೆ  ಹಾಜರಾಗಲು  18 ರಿಂದ 45 ವರ್ಷಗಳ ವಯೋಮಿತಿಯ ಕನ್ನಡ ಓದು, ಬರಹ ಬಲ್ಲ ಯುವಕ /ಯುವತಿಯರು ಬಿಳಿ ಹಾಳೆಯಲ್ಲಿ ಅಥವಾ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ  ನಿರ್ದೇಶಕರು, ರುಡ್‍ ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ – 574 240, ಬೆಳ್ತಂಗಡಿ ತಾಲೂಕು, ದ.ಕ. ಇವರಿಗೆ ಕಳುಹಿಸಬಹುದು ಅಥವಾ ಸಂಸ್ಥೆಯ ವೆಬ್‍ಸೈಟ್ ಮೂಲಕ www.rudsetujire.com ಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08256-236404ಗೆ ಸಂಪರ್ಕಿಸಲು ರುಡ್‍ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ ಇವರ ಪ್ರಕಟಣೆ ತಿಳಿಸಿದೆ.

Also Read  ಬಿಳಿನೆಲೆ: ಅಕ್ರಮ ಶೆಡ್ ವಿವಾದಕ್ಕೆ ತೆರೆ

error: Content is protected !!
Scroll to Top