ಮಂಗಳೂರು ವೈಭವದ ದಸರಾ ಆಚರಣೆಗೆ ಅಡ್ಡಿಯಾಗುತ್ತಾ ಕೊರೋನಾ..?

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 03: ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಾಸ್ಥಾನದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಗಮನದಲಿಟ್ಟುಕೊಂಡು ಪ್ರತಿ ವರ್ಷದಂತೆ ದಸರಾವನ್ನು ಆಚರಿಸಲಿದ್ದು, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಹೇಳಿದ್ದಾರೆ.

 

ಈ ಬಗ್ಗೆ ದಾಯ್ಡಿವಲ್ಡ್ ಜೊತೆ ಮಾತನಾಡಿದ ಅವರು, ಪ್ರತಿ ವರ್ಷದಂತೆ ವೈಭವದ ದಸರಾ ಆಚರಣೆಗೆ ಜನರ ಬೇಡಿಕೆ ಇದ್ದು, ಕೊರೊನಾ ಸೃಷ್ಟಿಸಿದ ಆರ್ಥಿಕ ಸಂಕಷ್ಟ, ಆತಂಕದಿಂದ ಹೊರಬರಲು ಚಿಂತನೆ ನಡೆಸುತ್ತಿದ್ದು, ಈ ಬಾರಿಯೂ ಪ್ರತಿವರ್ಷದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಆದರೆ, ವೈಭವದ ಶೋಭಾಯಾತ್ರೆಗೆ ಸರಕಾರದ ಮಾರ್ಗಸೂಚಿಗಾಗಿ ನಿರೀಕ್ಷಿಸುತ್ತಿರುವುದಾಗಿ ತಿಳಿಸಿದ್ದಾರೆ. ಇನ್ನು ಸರ್ಕಾರದಿಂದ ಮೈಸೂರು, ಮಡಿಕೇರಿ ದಸರಕ್ಕೂ ಕೂಡಾ ಅವಕಾಶ ದೊರಕಿದ್ದಲ್ಲಿ ಮಂಗಳೂರಿನಲ್ಲಿಯೂ ಅದ್ಧೂರಿ ದಸರಾ ನಡೆಯಲಿದೆ ಎಂದು ತಿಳಿಸಿದರು.

Also Read  ನಿಷೇಧಿತ ಇ-ಸಿಗರೇಟ್‌ ವಿರುದ್ಧ ಪೊಲೀಸರ ಕಾರ್ಯಾಚರಣೆ ➤ ನಾಲ್ವರು ಆರೋಪಿಗಳ ಬಂಧನ

 

 

error: Content is protected !!
Scroll to Top