ಸುಳ್ಯ: ಕ್ಯಾಂಪಸ್‌ ಫ್ರಂಟ್‌ ವತಿಯಿಂದ ಡ್ರಗ್ಸ್‌ ಕಡಿವಾಣಕ್ಕೆ ಒತ್ತಾಯ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 03: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕಾಲೇಜು ವಿದ್ಯಾರ್ಥಿಗಳು ಯುವಕರನ್ನು ಗುರಿಯಾಗಿಸಿಕೊಂಡು ಮಾದಕ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ಕೊಲೆ,ಸುಲಿಗೆ,ಅತ್ಯಾಚಾರದಂತಹ ಅಪರಾಧ ಚಟುವಟಿಕೆಗಳ ಹಿಂದೆ ಡ್ರಗ್ಸ್‌ ಜಾಲವು ಕಂಡು ಬರುತ್ತಿದೆ. ‌

 

 

ಈ ಜಾಲವನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಕ್ಯಾಂಪಸ್‌ ಫ್ರಂಟ್‌ ಸುಳ್ಯ ವೃತ್ತ ನಿರೀಕ್ಷಕರಿಗೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಕ್ಯಾಂಪಸ್‌ ಫ್ರಂಟ್‌ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಅನ್ಸಾರ್‌ ಬೆಳ್ಳಾರೆ, ಸುಳ್ಯ ವಲಯ ಅಧ್ಯಕ್ಷರಾದ ಆರ್ಫಿದ್‌ ಅಡ್ಕಾರ್‌, ಕಾರ್ಯದರ್ಶಿ ಸಾಜಿದ್‌ ಸುಳ್ಯ, ವಲಯ ಸಮಿತಿ ಸದಸ್ಯರಾದ ಶಮಲ್‌ ಸುಳ್ಯ, ಎನ್‌ಎಂಸಿ ಪದವಿ ಕಾಲೇಜು ಅಧ್ಯಕ್ಷರಾದ ಮಿನಾಝ್‌ ಜಾಲ್ಸೂರು ಉಪಸ್ಥಿತರಿದ್ದರು.

Also Read  ಕಡಬ ವರ್ತಕ ಸಂಘದ ಅಧ್ಯಕ್ಷ ಶಿವರಾಮ್ ಎಂ.ಎಸ್. ನಿಧನ

 

 

 

 

error: Content is protected !!
Scroll to Top