ಆಧಾರ್ ಜೋಡಣೆ ► ಡೆಡ್ ಲೈನ್ ಯಾವಾಗ ಗೊತ್ತೆ…???

(ನ್ಯೂಸ್ ಕಡಬ) newskadaba.com ಕಡಬ, ಸೆ.20, ಕೇಂದ್ರ ಸರ್ಕಾರ ಈಗಾಗಲೆ ಬ್ಯಾಂಕ್, ಪಾನ್ ಕಾರ್ಡ್, ಮೊಬೈಲ್ ಸಂಖ್ಯೆ, ಸಾಮಾಜಿಕ ಭದ್ರತಾ ಸೇವೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ಹೀಗಾಗಿ ಇಲ್ಲಿ ಯಾವೆಲ್ಲ ಯೋಜನೆಗಳಿಗೆ ಕಡ್ಡಾಯ ಮಾಡಿದೆ ಮತ್ತು ಆಧಾರ್ ನಂಬರ್ ಜೋಡಿಸಲು ನೀಡಿರುವ ಕೊನೆಯ ದಿನಾಂಕ ಯಾವುದು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಪಾನ್ ಲಿಂಕ್: ಕೇಂದ್ರಿಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಈ ಹಿಂದೆ ಪಾನ್ ಗೆ ಆಧಾರ್ ಲಿಂಕ್ ಮಾಡಲು ಆಗಸ್ಟ್ 31 ರಂದು ಕೊನೆಯ ದಿನಾಂಕವನ್ನು ನೀಡಿತ್ತು. ಆದರೆ ಈಗ ತೆರಿಗೆ ಪಾವತಿದಾರರಿಗೆ ಅನುಕೂಲವಾಗುವಂತೆ ಸರ್ಕಾರ ಡಿಸೆಂಬರ್ 31 ರವರೆಗೆ  ವಿಸ್ತರಿಸಿದೆ. ಆಧಾರ್ ಗೆ ಲಿಂಕ್ ಮಾಡದೇ ಇದ್ದರೆ ಆ ಪಾನ್ ನಂಬರ್ ನಿಷ್ಕ್ರಿಯವಾಗಲಿದೆ.

ಮೊಬೈಲ್ ಲಿಂಕ್: ಮೊಬೈಲ್ ನಂಬರ್‍ಗೆ ಆಧಾರ್ ಅನ್ನು ಲಿಂಕ್ ಮಾಡಿಸದಿದ್ದರೆ ಎಲ್ಲಾ ಮೊಬೈಲ್ ಫೋನ್ ನಂಬರ್‍ಗಳು 2018 ಫೆಬ್ರವರಿ ನಂತರ ನಿಷ್ರ್ಕಿಯಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ಈಗಾಗಲೇ ಹೇಳಿದೆ. ಕೇಂದ್ರದ ನಿರ್ಧಾರದ ಹಿನ್ನೆಲೆಯಲ್ಲಿ ಈಗ ಟೆಲಿಕಾಂ ಕಂಪೆನಿಗಳು ಗ್ರಾಹಕರಿಗೆ ಆಧಾರ್ ಲಿಂಕ್ ಮಾಡುವಂತೆ ಮೊಬೈಲ್ ಸಂದೇಶ ಕಳುಹಿಸುತ್ತಿದೆ.

Also Read  ಪುತ್ತೂರು: ಅಲ್ಯೂಮಿನಿಯಮ್ ಕೊಕ್ಕೆಯಲ್ಲಿ ಅಡಿಕೆ ತೆಗೆಯುವಾಗ ವಿದ್ಯುತ್ ಪ್ರವಹಿಸಿ ಉದ್ಯಮಿ ಮೃತ್ಯು

ಬ್ಯಾಂಕ್ ಲಿಂಕ್: ಎಲ್ಲಾ ಬ್ಯಾಂಕ್‍ಗಳಿಗೆ ಮತ್ತು ಹಣಕಾಸು ಸಂಸ್ಥೆಗಳಿಗೆ 2017ರ ಡಿಸೆಂಬರ್ 31ರ ಒಳಗಡೆ ಗ್ರಾಹಕರ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕೆಂದು ನಿರ್ದೇಶನ ನೀಡಿದೆ. ಹಣಕಾಸು ಸಂಸ್ಥೆಗಳು ಒಂದು ನಿಮ್ಮ ಗ್ರಾಹಕರನ್ನು ಅರಿಯಿರಿ(ಕೆವೈಸಿ) ದಾಖಲಾತಿಯನ್ನು ಸಿದ್ಧಪಡಿಸಬೇಕು. ಸಾಲವನ್ನು ಪಡೆಯುವಂತಹ ಗ್ರಾಹಕರು ತಮ್ಮ ಆಧಾರ ವಿವರವನ್ನು ನೀಡಬೇಕು ಎಂದು ತಿಳಿಸಿದೆ.

ಸಾಮಾಜಿಕ ಭದ್ರತಾ ಯೋಜನೆ ಲಿಂಕ್: ಆಧಾರ್‍ನ 12 ಡಿಜಿಟಲ್ ಸಂಖ್ಯೆಯನ್ನು ಸಾಮಾಜಿಕ ಭದ್ರತಾ ಯೋಜನೆಗಳಾದ ಎಲ್‍ಪಿಜಿ ಸಿಲಿಂಡರ್, ಪಿಂಚಣಿ, ಸರ್ಕಾರಿ ವಿದ್ಯಾರ್ಥಿ ವೇತನ ಇತರೆ ಸಾಮಾಜಿಕ ಯೋಜನೆಗಳಿಗೆ ಲಿಂಕ್ ಮಾಡಿಸಲು 2017ರ ಡಿಸೆಂಬರ್ 31ಕ್ಕೆ ನೀಡಲಾಗಿದೆ.

Also Read  ಸಿಎಂ ಮುಡಾ ಕೇಸ್ ಬೆನ್ನಲ್ಲೇ ಖರ್ಗೆ ಭೂ ಕಬಳಿಕೆ ಕಂಟಕ:ಲೋಕಾಯುಕ್ತಕ್ಕೆ ದೂರು

ಗ್ರಾಹಕರೆ ನಿಮ್ಮ ಅಧಾರ್ ನಂಬರ್ ಜೋಡಣೆಯನ್ನು ಮೇಲೆ ನಮೂದಿಸಿದ ದಿನಾಂಕದ ಮುಂಚಿತವಾಗಿ ಕಾರ್ಯಗತಗೊಳಿಸುವುದು ಒಳಿತು.

error: Content is protected !!
Scroll to Top