ಇಚ್ಲಂಪಾಡಿ: ಕಿರು ಸೇತುವೆ ಕಾಮಗಾರಿ ಪರಿಶೀಲನೆ

(ನ್ಯೂಸ್ ಕಡಬ) newskadaba.com ಇಚ್ಲಂಪಾಡಿ, ಸೆ. 03: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್‌ ರತ್ನಾಕರ ಹೆಗ್ಡೆ ಅವರು ಇಂದು ಇಚ್ಲಂಪಾಡಿ ಗ್ರಾಮಕ್ಕೆ ಭೇಟಿ ನೀಡಿದರು. ಕೌಕ್ರಾಡಿ ಗ್ರಾಮದ ಇಚ್ಲಂಪಾಡಿ ಹೊಸಮಠ ರಸ್ತೆಯಲ್ಲಿ ಬರುವ ಮುಡಿಪು ಕಿರು ಸೇತುವೆ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.

 

 

ಕೌಕ್ರಾಡಿ ತಾ.ಪಂ. ಸದಸ್ಯೆ ಕೆ.ಟಿ ವಲ್ಸಮ್ಮ ಮಾತನಾಡಿ ಇಚ್ಲಂಪಾಡಿ ಗಂಗಾಧರೇಶ್ವರ ದೇವಸ್ಥಾನಕ್ಕೆ ಗುಂಡ್ಯ ಹೊಳೆಯಿಂದ ಸಂಪರ್ಕಕ್ಕೆ ಮಧ್ಯದಲ್ಲಿ ನದಿ ಹರಿಯುತ್ತಿರುವುದರಿಂದ ಸಮಸ್ಯೆಯಾಗುತ್ತಿದ್ದು ಕರಾವಳಿ ಪ್ರಾಧಿಕಾರದಿಂದ ಇಚ್ಲಂಪಾಡಿ- ಹೊಸಮಠ ರಸ್ತೆಯಲ್ಲಿ ಇಚ್ಲಂಪಾಡಿಯಲ್ಲಿ ತೂಗು ಸೇತುವೆ ನಿರ್ಮಿಸುವಂತೆ ಮನವಿ ಮಾಡಿಕೊಂಡರು. ಕಾರ್ಯದರ್ಶಿ ಸಂದೀಪ್‌, ಎ.ಡಬ್ಲು.ಡಿ. ಇಂಜಿನಿಯರ್‌ ರಮೇಶ್‌, ಇಂಜಿನಿಯರ್‌ ಪವನ್‌ ಶೆಟ್ಟಿ, ಸ್ಥಳೀಯರಾದ ಗ್ರಾ.ಪಂ. ಮಾಜಿ ಸದಸ್ಯ ವೇಣುಗೋಪಾಲ ಹೊಸಮನೆ, ರೆನೊ ಮುಡಿಪು, ಈಶ್ವರ ಶೆಟ್ಟಿ ಕಂಚಿನಡ್ಕ, ಎಜೆ ಚಾಕೋ, ಮಹೇಶ್‌ ಕುಮಾರ್‌ ಮಾನಡ್ಕ, ಜೋನ್‌ ಜೇಕಬ್‌ ಮುಡಿಪು ಉಪಸ್ಥಿತರಿದ್ದರು.

Also Read  ಕೆರೆಯಲ್ಲಿ ಮುಳುಗಿ ತಾಯಿ ಮತ್ತು ಆಕೆಯ ಇಬ್ಬರು ಮಕ್ಕಳು ಮೃತ್ಯು

 

 

 

error: Content is protected !!
Scroll to Top