ಶ್ರೀಗಂಧ ಮರ ಕಡಿದ ಆರೋಪಿ ಬಂಧನ ➤ 3.6 ಕೆ.ಜಿ ಶ್ರೀಗಂಧ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು

(ನ್ಯೂಸ್ ಕಡಬ) newskadaba.com ಮೂಡುಬಿದಿರೆ. ಸೆ.03:  ಪಡುಕೊಣಾಜೆ ಗ್ರಾಮದ ಕೊಣಾಜೆ ರಕ್ಷಿತಾರಣ್ಯದಲ್ಲಿ ಶ್ರೀಗಂಧದ ಮರವನ್ನು ಕಡಿಯುತ್ತಿದ್ದ ವೇಳೆ ಬೆಳುವಾಯಿ ನಡಿಗುಡ್ಡೆ ಸೇಸಪ್ಪ ಎಂಬಾತನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಪ್ರಕರಣದ ಮತ್ತೋರ್ವ ಆರೋಪಿ ರಾಜು ಸ್ಥಳದಿಂದ ಪರಾರಿಯಾಗಿದ್ದಾನೆ. 3.6 ಕೆ.ಜಿ ಶ್ರೀಗಂಧವನ್ನು ವಶಕ್ಕೆ ಪಡೆಯಲಾಗಿದೆ.

 

 

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಶಾಂತ್, ವಲಯ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ ನಿರ್ದೇಶನದ ಮೇರೆಗೆ ಉಪ ಅರಣ್ಯಾಧಿಕಾರಿ ಮಂಜುನಾಥ, ಅಶ್ವಿತ್ ಗಟ್ಟಿ, ಕಾಂತರಾಜು ಬಿ.ಎ, ಅರಣ್ಯ ರಕ್ಷಕರಾದ ಬಸಪ್ಪ ಹಲಗೇರ, ಶಂಕರ ಗೌಡ, ರಮೇಶ್ ನಾಯ್ಕ್, ಸಂದೇಶ್ ಸ್ವರ್ಣನಾಯ್ಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

Also Read  ಚಾಕ್ಪೀಸ್ ನ ದೂಳಿನಿಂದ ಮಕ್ಕಳ ಕಣ್ಣಿಗೆ ಹಾನಿ ➤ ಎಚ್ಚರಿಕೆ ಕೊಟ್ಟ ವೈದ್ಯರು

 

error: Content is protected !!
Scroll to Top