ಸುಬ್ರಹ್ಮಣ್ಯ: ಮಠಾಧೀಶ ಶ್ರೀಗಳಿಂದ 24 ನೇ ಚಾತುರ್ಮಾಸ್ಯ ಸಮಾಪನ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ. 03: ಸುಬ್ರಹ್ಮಣ್ಯದ ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀಗಳಾದ ಶ್ರೀ ಶ್ರೀ ವಿದ್ಯಾಪ್ರಸನ್ನ ಅವರ 24 ನೇ ಚಾತುರ್ಮಾಸ್ಯ ಕಳೆದ ದಿನ ಸಮಾಪನ ಗೊಂಡಿತು.

 

 

ಈ ಹಿನ್ನಲೆಯಲ್ಲಿ ಕಳೆದ ದಿನ ದರ್ಪಣ ತೀರ್ಥ ನದಿಯಲ್ಲಿ ಮೃತ್ತಿಕಾ ವಿಸರ್ಜನೆ ನಡೆಯಿತು. ಬಳಿಕ ಶ್ರೀಗಳು ಬಿಳಿನೆಲೆಯ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ತೆರಳುವ ಮೂಲಕ ಸೀಮೋಲ್ಲಂಘನೆ ಮಾಡಿದರು. ಈ ಸಂದರ್ಭದಲ್ಲಿ ಭಕ್ತರು ಕುಣಿತ ಭಜನೆ ಮೂಲಕ ಮೆರವಣಿಗೆಯೊಂದಿಗೆ ಸ್ವಾಮೀಜಿಯವರನ್ನು ಸ್ವಾಗತಿಸಿದರು. ವೇಣುಗೋಪಾಲ ಶಾಸ್ತ್ರಿ, ವಾಸ್ತುಶಿಲ್ಪಿ ಪ್ರಸಾದ್‌ ಮುನಿಯಂಗಳ, ಮಾಹಬಲ ಕೃಷ್ಣ ಭಟ್‌, ಗಣಪತಿ ಭಟ್‌, ಸರೋಜಿನಿ ಮತ್ತಿತರರು ಉಪಸ್ಥಿತರಿದ್ದರು.

Also Read  ತುಳುನಾಡಿನ ಜಾನಪದ ಸಾಂಸ್ಕೃತಿಕ ಆಚರಣೆಗಳಲ್ಲಿ ಆಟಿ ಅಮಾವಾಸ್ಯೆ ಒಂದು

 

 

 

error: Content is protected !!
Scroll to Top