ಸ್ಕೂಟರ್‌- ಲಾರಿ ಢಿಕ್ಕಿ ➤‌ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಕುಂದಾಪುರ, ಸೆ. 03 : ತಲ್ಲೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ, ಸ್ಕೂಟರ್‌ ಸವಾರ ಮೃತಪಟ್ಟ ಘಟನೆ ನಡೆದಿದೆ. ಅಪಘಾತದಲ್ಲಿ ಮೃತರಾದವರನ್ನು ತಲ್ಲೂರು ಗ್ರಾಮದ ನಿವಾಸಿ ಸೀತಾರಾಮ ಶೆಟ್ಟಿ (57) ಎಂದು ಗುರುತಿಸಲಾಗಿದೆ.

 

ಬೈಂದೂರು ಕಡೆಯಿಂದ ಬರುತ್ತಿದ್ದ ಪಿಕ್ ಅಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಇರುವ ಡಿವೈಡರ್ ಮೇಲಕ್ಕೆ ಹತ್ತಿದ್ದು, ಇದೇ ವೇಳೆ ತಲ್ಲೂರು ಕಡೆಗೆ ಹೋಗುತ್ತಿದ್ದ ಸೀತಾರಾಮ್ ತನ್ನ ಬೈಕ್ ನ ವೇಗವನ್ನು ಕಡಿಮೆಗೊಳಿಸಿದರು. ಆಗ ಹಿಂಬಂದಿಯಿಂದ ಬಂದ ಮೀನಿನ ಲಾರಿ ಸ್ಕೂಟರ್‌ ಗೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಸೀತಾರಾಮ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪಟ್ಟಣದ ಶಾಸ್ತ್ರಿ ಸರ್ಕಲ್ ಬಳಿ ಪ್ಲಾಸ್ಟಿಕ್ ಉತ್ಪನ್ನಗಳ ವ್ಯವಹಾರದ ಅಂಗಡಿಯಲ್ಲಿ ಶೆಟ್ಟಿ ಸೀತಾರಾಮ ಉದ್ಯೋಗದಲ್ಲಿದ್ದರು. ಕೆಲಸ ಮುಗಿದು ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಕುಂದಾಪುರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

Also Read 

 

 

error: Content is protected !!
Scroll to Top