ಕಡಬ : ಕೆಲಸಕ್ಕೆಂದು ತೆರಳಿದ ಕುಂತೂರಿನ ಯುವತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ. ಸೆ.02:  ಯುವತಿಯೋರ್ವಳು ನಾಪತ್ತೆಯಾದ ಘಟನೆ ತಾಲೂಕಿನ ಕುಂತೂರು  ಗ್ರಾಮದ ಅರ್ಬಿ ಎಂಬಲ್ಲಿ ನಡೆದಿದೆ. ನಾಪತ್ತೆಯಾದವಳನ್ನು ಮಮತ (24) ಎಂದು ಗುರುತಿಸಲಾಗಿದೆ. ಈಕೆ ಸುಮಾರು 5 ವರುಷಗಳಿಂದ ಬಲ್ಯ ಗ್ರಾಮದ ಪಟ್ಟೆ ಎಂಬಲ್ಲಿನ ಸರ್ಕಾರಿ ಶಾಲೆಯಲ್ಲಿ ಖಾಸಗಿ ತಾತ್ಕಾಲಿಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು.

 

 

ಈಕೆ ಆಗಸ್ಟ್ 31 ರಂದು ಬೆಳಿಗ್ಗೆ ಎಂದಿನಂತೆ ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿರುತ್ತಾರೆ. ಆದರೆ ಸಂಜೆಯಾದರೂ ಶಾಲೆಯಿಂದ ಮನೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿರುತ್ತಾರೆ. ಇನ್ನು ಮನೆಯವರು ಈಕೆಯನ್ನು ಫೋನ್ ಮೂಲಕ ಸಂಪರ್ಕಿಸಿದಾಗ, ನಾನು ಇಬ್ಬರು ಸ್ನೇಹಿತರ ಜೊತೆ ಕೆಲಸಕ್ಕೆ ಸೇರುವುದಕ್ಕೋಸ್ಕರ  ಮೈಸೂರಿಗೆ ಹೋಗಿರುತ್ತೆನೆ ಎಂದು ಸಂದೇಶವನ್ನು ಕಳುಹಿಸಿರುತ್ತಾಳೆ. ಬಳಿಕ ಆಕೆಯಿಂದ ಯಾವುದೇ ಸಂದೇಶವಾಗಲಿ, ಫೋನ್ ಕರೆಗಳಾಗಲಿ ಬಾರದೆ ಫೋನ್ ಸ್ವೀಚ್ ಆಫ್ ಆಗಿದೆ. ಈ ಕುರಿತಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ನಿರೀಕ್ಷತ ಮಳೆ ಬೀಳದ ಹಿನ್ನೆಲೆ ➤ರಾಜ್ಯಕ್ಕೆ ಎದುರಾಗುತ್ತಿದೆಯೇ ಬರಗಾಲದ ಭೀತಿ..?

 

error: Content is protected !!
Scroll to Top