ಬಸ್ಸಿನಡಿಗೆ ಬಿದ್ದು ಗರ್ಭಿಣಿ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು. ಸೆ.02: ಗರ್ಭಿಣಿಯಾಗಿದ್ದ ನರ್ಸ್  ಬಸ್ಸಿನಡಿಗೆ ಬಿದ್ದು  ಮೃತಪಟ್ಟ ದಾರುಣ ಘಟನೆ ಕಣ್ಣೂರಿನ  ಪೆರವೂರು ಎಂಬಲ್ಲಿ ಇಂದು ಬೆಳಿಗ್ಗೆ  ನಡೆದಿದೆ.

 

ಕಣ್ಣೂರು ಆಸ್ಟರ್ ಮಿಮ್ಸ್ ಆಸ್ಪತ್ರೆಯ ನರ್ಸ್ ದಿವ್ಯಾ (27) ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ಸುಮಾರು ಎಂಟು ಗಂಟೆಗೆ ಆಸ್ಪತ್ರೆಗೆ ತೆರಳಲು ಬಸ್ಸು ಹತ್ತುತ್ತಿದ್ದಾಗ ಈ ಘಟನೆ ನಡೆದಿದೆ. ದಿವ್ಯಾ ರವರು ಆರು ತಿಂಗಳ ಗರ್ಭಿಣಿಯಾಗಿದ್ದರು. ಗಂಭೀರ ಗಾಯಗೊಂಡ ದಿವ್ಯಾ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

Also Read  ರಜೆಯ ದಿನದಂದು ಕರ್ತವ್ಯ ನಿರ್ವಹಿಸಿದ ನೌಕರರಿಗೆ ಹೆಚ್ಚುವರಿ ವೇತನ- ಕೆಎಸ್ಸಾರ್ಟಿಸಿ ಆದೇಶ

 

 

error: Content is protected !!
Scroll to Top