ವಿದೇಶದಿಂದ ತಾಯ್ನಾಡಿಗೆ ಆಗಮಿಸುವವರಿಗೆ ಸರಕಾರದಿಂದ ಹೊಸ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 02. ವಿದೇಶದಿಂದ ಮಂಗಳೂರಿಗೆ ಮರಳುವ ಪ್ರಯಾಣಿಕರಿಗೆ ನಾಗರಿಕ ವಿಮಾನಯಾನ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ನೀಡಿದೆ.

ಸೂಚನೆಗಳನ್ವಯ ತಾಯ್ನಾಡಿಗೆ ಮರಳುವ ಭಾರತೀಯರು ಅಧಿಕೃತ ವೆಬ್ ಸೈಟ್ ನಲ್ಲಿ ‘ಏರ್ ಸುವಿದಾ ಸ್ವಯಂ – ವರದಿ ಫಾರ್ಮ್’ ಅನ್ನು ಭರ್ತಿ ಮಾಡಬೇಕಾಗುತ್ತದೆ. (https: //www.newdelhiairport.in/airsuvidha/APHO-registration) ಅಲ್ಲದೆ, ಪ್ರಯಾಣಿಕರು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳನ್ನು ಹತ್ತುವ ಮುನ್ನ ವಿಮಾನ ನಿಲ್ದಾಣದ ವರದಿಯ ಮೊದಲೇ ನೋಂದಾಯಿಸಿಕೊಳ್ಳಬೇಕು, ಎಲ್ಲಾ ಪ್ರಯಾಣಿಕರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಆರೋಗ್ಯ ಸೇತು ಆ್ಯಪ್, ಕ್ವಾಂಟೈನ್ ವಾಚ್ ಮತ್ತು ಆಪ್ತಮಿತ್ರ ಎಂಬ ಮೂರು ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಅದೇಶ ನೀಡಲಾಗಿದೆ. ಚಾಲ್ತಿಯಲ್ಲಿರುವ ಭಾರತೀಯ ಸಿಮ್ ಕಾರ್ಡ್, ಸ್ಥಳೀಯ ಸಿಮ್ ಇಲ್ಲದೇ ಇದ್ದಲ್ಲಿ ಅವರು ತಮ್ಮ ಕುಟುಂಬ ಸಂಬಂಧಿಕರನ್ನು ಸ್ಥಳೀಯ ಸಿಮ್ ಪಡೆಯಲು ಕೇಳಿಕೊಳ್ಳಬೇಕು. ಪ್ರಯಾಣಿಕರು ಮಂಗಳೂರಿಗೆ ಬರುವ ಮೊದಲು ಸಿಮ್ ಅನ್ನು ಸಕ್ರಿಯಗೊಳಿಸಿರಬೇಕು, ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಹೊಸ ಸಿಮ್ ಕಾರ್ಡ್‌ಗಳನ್ನು ಸಹ ಖರೀದಿಸಬಹುದು ಎಂದು ತಿಳಿಸಿದೆ.

Also Read  ಉಪಚುನಾವಣೆ: ಯಲ್ಲಾಪುರದಲ್ಲಿ ಹೆಬ್ಬಾರ್ ಗೆಲವು, ಅಧಿಕೃತ ಘೋಷಣೆಯೊಂದೇ ಬಾಕಿ

error: Content is protected !!
Scroll to Top