ಉಪ್ಪಿನಂಗಡಿ : ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್ ವಿಂಗ್ ವಲಯದ ನೂತನ ಸಮಿತಿ ರಚನೆ ಹಾಗು ಮೆಂಬರ್ ಶಿಪ್ ಫಾರಂ ವಿತರಣೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ,ಸೆ. 02. ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್ ವಿಂಗ್ ಉಪ್ಪಿನಂಗಡಿ ವಲಯದ ನೂತನ ಸಮಿತಿ ರಚನೆ ಹಾಗು ಫಾರಂ ವಿತರಣೆ ಇಂದು  ನೂರಾನಿಯ ಮದರಸ ಹಾಲ್ ಕುದ್ಲೂರು ಉಪ್ಪಿನಂಗಡಿಯಲ್ಲಿ ನಡೆಯಿತು.

ವಲಯ ಅಧ್ಯಕ್ಷರಾದ ಅಶ್ರಫ್ ಫಾಝಿಲ್ ಬಾಖಾವಿ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಿ  ದುಆಗೆ ಚಾಲನೆ ನೀಡಿದರು. ವಲಯ ಎಸ್ ಕೆ ಎಸ್ ಎಸ್ ಎಫ್ ಉಪಾಧ್ಯಕ್ಷರಾದ ಯೂಸುಫ್ ಪೆದಮಲೆ ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿದರು. ವಲಯ ಕಾರ್ಯದರ್ಶಿ ಹಾರೀಶ್ ಕೌಸರಿ ಉಸ್ತಾದ್ ಹಾಗು ಎಸ್ ಕೆ ಎಸ್ ಎಸ್ ಎಫ್ ಕ್ಯಾಂಪಸ್ ವಿಂಗ್  ಕರ್ನಾಟಕ ರಾಜ್ಯಾಧ್ಯಕ್ಷರಾದ ಇಬ್ರಾಹಿಂ ಬಾತಿಷಾ ವಂಶಿ  ಕೊಡ್ಲಿಪೇಟೆ ವಿಷಯ ಮಂಡನೆ ಮಾಡಿದರು. ಎಸ್ ಕೆ ಎಸ್ ಎಸ್ ಎಫ್ ಉಪ್ಪಿನಂಗಡಿ ವಲಯದ ವರ್ಕಿಂಗ್ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಆಶಂಸ ಭಾಷಣ ಮಾಡಿದರು. ವೇದಿಕೆಯಲ್ಲಿ ಎಸ್ ಕೆ ಎಸ್ ಎಸ್ ಎಫ್  ಉಪ್ಪಿನಂಗಡಿ ವಲಯ  ಕಾರ್ಯದರ್ಶಿ ಅಬೂಬಕ್ಕರ್ ಮುಸ್ಲಿಯಾರ್ ಪೆರ್ನೆ, ಎಸ್ ಕೆ ಎಸ್ ಎಸ್ ಎಫ್ ಆತೂರು ಕ್ಲಸ್ಟರ್ ಇಬಾದ್ ಕಾರ್ಯದರ್ಶಿ ಅಬ್ದುಲ್ ರಝಕ್ ದಾರಿಮಿ ಹಾಗು ಎಸ್ ಕೆ ಎಸ್ ಎಸ್ ಎಫ್ ಆತೂರು ಕ್ಲಸ್ಟರ್ ಸರ್ಗಾಲಯ ಕಾರ್ಯದರ್ಶಿ ಅಬ್ದುಲ್ ರಝಕ್ ದಾರಿಮಿ ಉಪಸ್ಥಿತರಿದ್ದರು.

Also Read  ರೇಷನ್ ಕಾರ್ಡ್ ವಿತರಣೆಗೆ ಸಮಯ ಮಿತಿಯೊಳಗೆ ಕ್ರಮಕೈಗೊಳ್ಳಿ➤ಯು ಟಿ ಖಾದರ್

 

ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಇಬ್ರಾಹಿಂ ಬಾತಿಷಾ ವಂಶಿ ಕೊಡ್ಲಿಪೇಟೆ ಇವರು ಎಸ್ ಕೆ ಎಸ್ ಎಸ್ ಎಫ್ ಉಪ್ಪಿನಂಗಡಿ ವಲಯ ಕಾರ್ಯದರ್ಶಿಗ ಹಾರಿಸ್ ಕೌಸರಿ ಉಸ್ತಾದ್ ಗೆ ಮೆಂಬರ್ ಶಿಪ್ ಫಾರಂ ವಿತರಣೆ ಮಾಡಿದರು. ಅಬೂಬಕ್ಕರ್ ಸಿದ್ದೀಕ್  ಮುನೀರ್ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.  ಕನ್ವಿನರ್ ಮೊಹಮ್ಮದ್ ಝಿಯಾದ್  ವಂದಿಸಿದರು. ನಂತರ ಎಸ್ ಕೆ ಎಸ್ ಎಸ್ ಎಫ್ ವಿಖಾಯ ಉಪ್ಪಿನಂಗಡಿ ವಲಯ 2020-22ನೇ ಸಾಲಿನ ನೂತನ ಸಮಿತಿ ರಚನೆ ಮಾಡಲಾಯಿತು.

 

ಎಸ್ ಕೆ ಎಸ್ ಎಸ್ ಎಫ್ ವಿಖಾಯ ಉಪ್ಪಿನಂಗಡಿ ಕಾರ್ಯದರ್ಶಿ ಯಾಗಿ  ಅಬೂಬಕ್ಕರ್ ಸಿದ್ದೀಕ್ ಮುನೀರ್, ಸೆಕ್ರೆಟರಿ ಅಬೂಬಕ್ಕರ್ ಸಿದ್ದೀಕ್ ಮುನೀರ್, ವರ್ಕಿಂಗ್ ಸೆಕ್ರೆಟರಿ ಮೊಹಮ್ಮದ್ ಉಸ್ಮಾನ್ ರಹೀಸು, ಚೇರ್ಮನ್ ಸಿರಾಜ್, ಎ ವೈಸ್ ಚೇರ್ಮನ್ ಯಾಗಿ ಮುಸ್ತಾಕ್ ಇಸ್ಮಾಯಿಲ್ ಹಾಗು  ಮೊಹಮ್ಮದ್ ಝುಬೈರ್, ಕನ್ವೀನರ್ ಮೊಹಮ್ಮದ್ ಝಿಯಾದ್, ವೈಸ್ ಕನ್ವೀನರ್ ಯಾಗಿ ಸೂಫಿಯಾನ್ ಮತ್ತು ಅನ್ವರ್ ಸ್ವಾದಿಕ್, ಕೋಶಾಧಿಕಾರಿಯಾಗಿ ಮೊಹಮ್ಮದ್ ಸಾಬೀತ್,  ಮೀಡಿಯಾ ವಿಂಗ್ ಝುನೈಫು,  ಮೀಡಿಯಾ ಮತ್ತು ಕ್ಲಸ್ಟರ್ ಇಂಚಾರ್ಜ್ ರಾಗಿ ಮೊಹಮ್ಮದ್ ಉಸ್ಮಾನ್  ರನೀಸು, ಶಾಕೀರ್, ಮೊಹಮ್ಮದ್ ಝುಬೈರ್,  ಸುಹೈಲ್,  ಅನ್ವರ್ ಸ್ವಾದಿಕ್ ವರ್ಕಿಂಗ್ ಮೆಂಬರ್ಸ್ ರಾಗಿ ಮೊಹಮ್ಮದ್ ಇಸ್ಮಾಯಿಲ್ ಸನಾಬಿಲ್, ಮೊಹಮ್ಮದ್ ಜಾಬಿರ್ ನೌರಿಸು, ಮೊಹಮ್ಮದ್ ರಫೀಜ್, ಮೊಹಮ್ಮದ್ ನಾಸಿರ್, ಜ್ಹೈನುಲ್ ಆಬಿದು, ಮೊಹಮ್ಮದ್ ಮುಹಸಿನ್ ಜುನೈದ್ ಆಯ್ಕೆ ಮಾಡಲಾಯಿತು.  ಅಭಿಯಾನದಲ್ಲಿ 300 ಕ್ಕೂ ಹೆಚ್ಚು ಮಂದಿ ಸಾರ್ವಜನಿಕರು ಪ್ರಯೋಜನ ಪಡೆದುಕೊಂಡರು.

Also Read  ವಿದ್ಯಾಗಮ ಕಾರ್ಯಕ್ರಮ -ಸಹಾಯವಾಣಿ ಪ್ರಾರಂಭ

error: Content is protected !!
Scroll to Top