ಸ್ವರ್ಣಾ ನದಿಯಲ್ಲಿ ಪಂಚಲೋಹದ ಕೃಷ್ಣನ ವಿಗ್ರಹ ಪತ್ತೆ

(ನ್ಯೂಸ್ ಕಡಬ) newskadaba.com ಉಡುಪಿ. ಸೆ.02:  ಬೆಳ್ಳಂಪಳ್ಳಿ ಸ್ವರ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಕೆಳಗೆ ಆ.31ರಂದು ರಾತ್ರಿ ಕೃಷ್ಣನ ಪಂಚಲೋಹದ ವಿಗ್ರಹ ಪತ್ತೆಯಾಗಿದೆ.

ರಾತ್ರಿ 8 ಗಂಟೆ ಹೊತ್ತಿಗೆ ಮೀನಿಗಾಗಿ ಗಾಳ ಹಾಕುತ್ತಿದ್ದ ಸ್ಥಳೀಯ ಮೀನುಗಾರರಾದ ಪುರಂದರ ಕೋಟ್ಯಾನ್, ರಾಕೇಶ್, ನಿಶಾನ್, ರಿತಿಕ್, ನವೀನ್, ಆತ್ರಾಡಿ ದಿನೇಶ್ ಪೂಜಾರಿ ಅವರಿಗೆ ಹೊಳೆಯುತ್ತಿರುವ ವಸ್ತು ಕಂಡುಬಂತು.ವಿಗ್ರಹವನ್ನು ಮೇಲೆತ್ತಿ ಗಮನಿಸಿದಾಗ ಕೊಳಲೂದುವ ಗೋಪಾಲಕೃಷ್ಣನ ಆಕೃತಿಯ ಪಂಚಲೋಹ ವಿಗ್ರಹವಾಗಿತ್ತು. ವಿಗ್ರಹ 8 ಕೆ.ಜಿ.ತೂಕವಿದೆ. ಮೀನುಗಾರರು ಸ್ಥಳೀಯರಾದ ಬೆಳ್ಳಂಪಳ್ಳಿ ಭೂತರಾಜ ಸನ್ನಿಧಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅವರಿಗೆ ವಿಚಾರ ತಿಳಿಸಿದ್ದು, ವಿಗ್ರಹವನ್ನು ಹಿರಿಯಡ್ಕ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

 

Also Read  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ➤ “ಬ್ಯಾರಿ ವ್ಯಾಕರಣ ಗ್ರಂಥ”

error: Content is protected !!
Scroll to Top