ಎಸ್ಡಿಪಿಐ ಪಾಂಡವರಕಲ್ಲು ವತಿಯಿಂದ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ. 02.  ಎಸ್ ಡಿ ಪಿ ಐ ಪಾಂಡವರಕಲ್ಲು ವತಿಯಿಂದ ಆಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನ  ಕಾರ್ಯಕ್ರಮವು ಪಾಂಡವರಕಲ್ಲು ಸಮುದಾಯ ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಯೂಸುಫ್ ಆಲಡ್ಕ ವಹಿಸಿದ್ದರು. ಬಂಟ್ವಾಳ ಪುರಸಭೆಯ ಸದಸ್ಯರಾದ ಮೂನಿಶ್ ಅಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಎಸ್.ಡಿ.ಪಿ.ಐ ಬಡಗಕಜೆಕಾರು ಗ್ರಾಮ ಸಮಿತಿ ಅಧ್ಯಕ್ಷರು ಹಾಗೂ ಮಾಜಿ ಪಂಚಾಯತ್ ಸದಸ್ಯರಾದ ಅಥಾವುಲ್ಲಾ ಕೆದಿಲೆ ಕಾರ್ಯಕ್ರಮವನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ PFI ಪುಂಜಾಲಕಟ್ಟೆ ಏರಿಯಾ ಅಧ್ಯಕ್ಷರಾದ ಹನೀಫ್ ಪುಂಜಾಲಕಟ್ಟೆ, ಬದ್ರಿಯಾ ಜುಮ್ಮಾ ಮಸ್ಜಿದ್ ಪಾಂಡವರಕಲ್ಲು ಇದರ ಅಧ್ಯಕ್ಷರಾದ ಅಬೂಬಕರ್ ಕೆದಿಲೆ, ಗೌರವಾಧ್ಯಕ್ಷರಾದ ಪುತ್ತುಮೋನು ಕುದುರು, ಮಾಜಿ ಅಧ್ಯಕ್ಷರಾದ ಹಕೀಂ ಕುದುರು, NIWA ಕಮಿಟಿ ಅಧ್ಯಕ್ಷರಾದ ಉಮರ್ ಕೆಪಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಯಾಕೂಬ್ ಉದ್ದದಗುಡ್ಡೆ, SDPI ಕಾವಳಮೂಡೂರು ವಲಯಾಧ್ಯಕ್ಷ ಅಬೂಬಕರ್ ಮದ್ದ, SSF ಮಡಂತ್ಯಾರು ಸೆಕ್ಟರ್ ಕಾರ್ಯದರ್ಶಿ ಶಂಸುದ್ದೀನ್ ಮುಂತಾದವರು ಉಪಸ್ಥಿತರಿದ್ದರು. ಇಮ್ರಾನ್ ಪಾಂಡವರಕಲ್ಲು ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದಗೈದರು.

Also Read  ಪುತ್ತೂರು: ಮಾನಸಿಕ ಅಸ್ವಸ್ಥನಿಗೆ ಕಾರು ಢಿಕ್ಕಿ

 

error: Content is protected !!
Scroll to Top