ಸೆಲೆಬ್ರಿಟಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು. ಸೆ.02 : ದಿನಕಳೆದಂತೆ ಮಾದಕ ವಸ್ತು ಲೋಕದ ಹಲವು ಮುಖಗಳು ಅನಾವರಣಗೊಳ್ಳುತ್ತಿದೆ. ಡ್ರಗ್ ಪೆಡ್ಲರ್ ಗಳು ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ಡ್ರಗ್ಸ್ ಜಾಲದ ಕರಾಳ ಮುಖ ಬಯಲಾಗುತ್ತಿದೆ. ಈ ಮಧ್ಯೆ ಎನ್ ಸಿಬಿ ಅಧಿಕಾರಿಗಳು ದಾಳಿ ಮಾಡಿ ರಾಷ್ಟ್ರ ರಾಜಧಾನಿಯಿಂದ ರಾಜ್ಯ ರಾಜಧಾನಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಓರ್ವನನ್ನು ಬಂಧಿಸಿದ್ದಾರೆ.

 

 

ಬಂಧಿತ ಆರೋಪಿಯನ್ನು ಎಫ್ ಅಹಮದ್ ಎಂದು ಗುರುತಿಸಲಾಗಿದೆ. ಈತ ಪೇಜ್ ತ್ರೀ ಸೆಲೆಬ್ರಿಟಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಎಂದು ಎನ್ ಸಿಬಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. ಆರೋಪಿ ಅಹಮದ್ ಬಳಿಯಿಂದ ಮೂರು ಕೆಜಿಯಷ್ಟು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈತ ದಿಲ್ಲಿಯಿಂದ ಮುಂಬೈಗೆ, ಮುಂಬೈನಿಂದ ಬೆಂಗಳೂರಿಗೆ ಪೂರೈಕೆ ಮಾಡುತ್ತಿದ್ದ ಎಂದು ವರದಿಯಾಗಿದೆ. ಗೋವಾ ಮೂಲದವನಾದ ಈತ ಖಾಸಗಿ ರೆಸಾರ್ಟ್ ಒಂದರಲ್ಲಿ ಕಾರು ಚಾಲಕನಾಗಿದ್ದ ಎನ್ನಲಾಗಿದೆ. ಒಂದು ಗ್ರಾಂಗೆ ಐದು ಸಾವಿರದಷ್ಟು ಬೆಲೆ ಬಾಳುವ ಈ ಮಾದಕ ವಸ್ತುವನ್ನು ಪ್ರತಿಷ್ಠಿತ ವ್ಯಕ್ತಿಗಳಿಗೆ ಪೂರೈಸುತ್ತಿದ್ದ ಎನ್ನಲಾಗಿದೆ.

Also Read  ಮಂಗಳೂರು: ಶ್ರೀನಿವಾಸ್ ಕ್ಯಾಂಪಸ್ ನಲ್ಲಿ “ರೋಬೊಟಿಕ್ಸ್” ತಂತ್ರಜ್ಞಾನದ ಕುರಿತು 2 ದಿನಗಳ ಕಾರ್ಯಾಗಾರ

 

 

error: Content is protected !!
Scroll to Top