ಕಾರಾಗೃಹ ಸಂದರ್ಶಕ ಮಂಡಳಿ ಸದಸ್ಯತ್ವ- ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 01. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಪ್ರಕಾರ ಕಾರಾಗೃಹಗಳ ಸಂದರ್ಶಕರ ಮಂಡಳಿಗೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಪರವಾಗಿ ಪ್ರತಿನಿಧಿಯೊಬ್ಬರನ್ನು ಸೂಚಿಸಬೇಕಾಗಿರುತ್ತದೆ. ಈ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಕೇಂದ್ರ / ಜಿಲ್ಲಾ ಕಾರಾಗೃಹಗಳ ಸಂದರ್ಶಕರ ಮಂಡಳಿಗಳಿಗೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಅಯೋಗದ ಪರವಾಗಿ ನಾಮನಿರ್ದೇಶನ ಮಾಡುವ ಸಲುವಾಗಿ ಮಾನವ ಹಕ್ಕುಗಳ ಸಂರಕ್ಷಣಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ನೋಂದಾಯಿತ ಸಂಘ ಸಂಸ್ಥೆಗಳ  ಸದಸ್ಯರನ್ನು ಆಯ್ಕೆ ಮಾಡಿ ವರದಿಯನ್ನು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಸಬೇಕಾಗಿರುತ್ತದೆ.

ನೋಂದಾಯಿತ ಸಂಘ ಸಂಸ್ಥೆಯ ಸದಸ್ಯರು ಮತ್ತು ಪದಾಧಿಕಾರಿಗಳಿಗೆ ಈ ಕಾರಾಗೃಹಗಳ ಸಂದರ್ಶಕರ ಮಂಡಳಿಗೆ ಸದಸ್ಯರಾಗಲು ಅವಕಾಶವಿದ್ದು, ಅರ್ಜಿಯನ್ನು ದ.ಕ. ಜಿಲ್ಲಾಧಿಕಾರಿ ಕಚೇರಿಗೆ ಸೆಪ್ಪೆಂಬರ್ 9 ರ ಮಧ್ಯಾಹ್ನ 12 ಗಂಟೆಯೊಳಗೆ ಅರ್ಜಿ ಸಲ್ಲಿಸತಕ್ಕದ್ದು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು: ಕಡ್ಡಾಯವಾಗಿ ನೋಂದಾಯಿತ ಸಂಘ ಸಂಸ್ಥೆಯ ಸದಸ್ಯರು, ಪಧಾಧಿಕಾರಿಗಳಾಗಿರಬೇಕು, ಮಾನವ ಹಕ್ಕುಗಳ ಸಂರಕ್ಷಣಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರಬೇಕು, ಸದಸ್ಯರಾಗಲು ಇಚ್ಚಿಸುವ ವ್ಯಕ್ತಿಗಳು 35 – 60 ವರ್ಷದೊಳಗಿನ ವಯೋಮಿತಿಯಲ್ಲಿ ಇರಬೇಕು ಮತ್ತು ಉತ್ತಮ ನಡತೆ ಮತ್ತು ಚಾರಿತ್ರ್ಯ ಉಳ್ಳವರಾಗಿಬೇಕು, ಯಾವುದೇ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿರಬಾರದು ಹಾಗೂ ಪೊಲೀಸ್ ಆಯುಕ್ತರು, ಮಂಗಳೂರು ನಗರ, ಪೊಲೀಸ್ ಅಧೀಕ್ಷಕರು, ದಕ್ಷಿಣ ಕನ್ನಡ ಜಿಲ್ಲೆ ಇವರಿಂದ ಗುಣನಡತೆ ಚಾರಿತ್ರ್ಯ ದೃಢಪತ್ರವನ್ನು ಪಡೆದಿರಬೇಕು ಎಂದು ದ.ಕ. ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Also Read  ನದಿಗೆ ಈಜಲು ಇಳಿದಿದ್ದ ಇಬ್ಬರು ಉಪನ್ಯಾಸಕರು ನೀರಿನಲ್ಲಿ ಮುಳುಗಿ ಮೃತ್ಯು

error: Content is protected !!
Scroll to Top