ಶಾಸಕರ ಅನುದಾನ ಬಿಡುಗಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 01. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ. ಹರೀಶ‍್  ಕುಮಾರ್ ಇವರ 2019-20 ನೇ ಸಾಲಿನಲ್ಲಿ ಬೆಳ್ತಂಗಡಿ ತಾಲೂಕು ಹೊಸಂಗಡಿ ಗ್ರಾಮದ ಪಡ್ಯೊಡಿ – ಕೂಡಮಣಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ. 5 ಲಕ್ಷ, ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗರ್ಡಾಡಿ ಸಂತ ಸೆಬಾಸ್ಟಿಯನ್ ದೇವಾಲಯದ ಒಳಾಂಗಣ ಇಂಟರ್ ಲಾಕ್ ಅಳವಡಿಕೆ ಕಾಮಗಾರಿಗೆ ರೂ. 5 ಲಕ್ಷ, ಮಂಗಳೂರು ತಾಲೂಕಿನ ತೋಕೂರು ಗ್ರಾಮದ ಜೋಕಟ್ಟೆ ಮುಹಿಯುದ್ದೀನ್ ಜುಮ್ಮಾ ಮಸೀದಿ ಬಳಿ ಚರಂಡಿ ರಚನೆಗೆ ರೂ. 2 ಲಕ್ಷ, ಬೆಳ್ತಂಗಡಿ ತಾಲೂಕಿನ ದೇವಾಡಿಗರ ಸೇವಾ ವೇದಿಕೆ(ರಿ) ವೇಣೂರು ಇದರ ಸಮುದಾಯ ಭವನದ ವಿಸ್ತರಣೆಗೆ ರೂ. 3 ಲಕ್ಷ, ಮಂಗಳೂರು ತಾಲೂಕು ಬೊಂಡಂತಿಲ ಗ್ರಾಮ ರೆಡ್ ಕ್ಯಾಮೆಲ್ಸ್ ಇಸ್ಲಾಮಿಕ್ ಸ್ಕೂಲ್ ಕ್ರೀಡಾ ಕೊಠಡಿ ನಿರ್ಮಾಣಕ್ಕೆ ರೂ. 2.50 ಲಕ್ಷ, ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ತಾಜುಲ್ ಹುದಾ ಎಜುಕೇಶನ್ ಸೆಂಟರ್ (ರಿ) ಕಟ್ಟಡ ಕಾಮಗಾರಿ ರೂ. 2 ಲಕ್ಷ, ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಗಾಂಧಿ ನಗರ ಪ್ರೌಢಶಾಲೆ ಬಳಿ ಮೋರಿ ರಚನೆಗೆ ರೂ. 1 ಲಕ್ಷ, ಬೆಳ್ತಂಗಡಿ ತಾಲೂಕು ಕಸಬಾ ಗ್ರಾಮದ ಸುದೆ ಮುಗೇರು ಪ.ಜಾ ಸ್ಮಶಾನ ರಸ್ತೆ ಅಭಿವೃದ್ಧಿಗೆ ರೂ. 2 ಲಕ್ಷ, ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾ.ಪಂ ಬಸ್ಸು ತಂಗುದಾಣ ರೂ. 3.50 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ.

Also Read  ಮುಜರಾಯಿ ಸಚಿವರ ಪ್ರವಾಸ

2018-19 ನೇ ಸಾಲಿನ ಅನುದಾನದಲ್ಲಿ ಮೂಡಬಿದ್ರೆ ತಾಲೂಕು ಸ್ಕೌಟ್ ಗೈಡ್ಸ್ ಕನ್ನಡ ಭವನ ನಿರ್ಮಾಣಕ್ಕೆ ರೂ. 5 ಲಕ್ಷ, ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ನೂರಿಯಾ ವೆಲ್ಛೇರ್ ಅಸೋಸಿಯೇಶನ್ (ರಿ) ಬದ್ರಿಯಾ ಜುಮ್ಮಾ ಮಸೀದಿ ಅರಬಿಕ್ ಶಾಲೆಗೆ ಶೌಚಾಲಯ ನಿರ್ಮಾಣಕ್ಕೆ ರೂ. 3 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Also Read  ಮಂಗಳೂರು: ನೀತಿ ಸಂಹಿತೆ ಹಿನ್ನೆಲೆ         ➤ ಕರಾವಳಿಯಾದ್ಯಂತ ಪೊಲೀಸರ ಹದ್ದಿನಕಣ್ಣು

error: Content is protected !!
Scroll to Top