(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 01. 2019-20ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಮೆಟ್ರಿಕ್ ನಂತರದ ಕೋರ್ಸ್‍ಗಳಲ್ಲಿ ಉತ್ತಿರ್ಣರಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಮೆಟ್ರಿಕ್ ನಂತರದ ಕೋರ್ಸ್ ಗಳಿಗೆ ಪ್ರೋತ್ಸಾಹ ಧನದ ವಿವರ ಇಂತಿವೆ:
ದ್ವಿತೀಯ ಪಿಯುಸಿ, 3 ವರ್ಷ ಪಾಲಿಟೆಕ್ನಿಕ್ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ರೂ. 20,000, ಡಿಗ್ರಿ (ಬಿಎ / ಬಿ.ಕಾಂ / ಬಿ.ಎಸ್ಸಿ / ಬಿ.ಎಡ್ / ಬಿ ಎಡ್) ವಿದ್ಯಾರ್ಥಿಗಳಿಗೆ ರೂ. 25,000, ಸ್ನಾತಕೋತ್ತರ ಕೋರ್ಸ್. ಎಂಬಿಎ, ಎಂಸಿಎ, ಮಿಫಾ, ಎಂ.ಎಡ್ ವಿದ್ಯಾರ್ಥಿಗಳಿಗೆ ರೂ. 30,000, ಕೃಷಿ, ಎಂಜಿನಿಯರಿಂಗ್, ಪಶುವೈದ್ಯಕೀಯ, ಮೆಡಿಸಿನ್ ವಿದ್ಯಾರ್ಥಿಗಳಿಗೆ ರೂ. 35,000 ಪ್ರೋತ್ಸಾಹಧನ ನೀಡಲಾಗುವುದು. ದ್ವಿತೀಯ ಪಿ.ಯು.ಸಿ, ಪದವಿ, ಸ್ನಾತಕೋತ್ತರ ಪದವಿ ಹಾಗೂ ತಾಂತ್ರಿಕ ಕೋರ್ಸುಗಳ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ಸಮಾಜ ಕಲ್ಯಾಣ ಇಲಾಖೆಯ ಸಂಬಂಧಪಟ್ಟ ಜಿಲ್ಲಾ ಮಟ್ಟದ ಕಚೇರಿಯಿಂದ ಪಾವತಿ ಮಾಡಲಾಗುವುದು. ವಿದ್ಯಾರ್ಥಿಗಳು ಆನ್‍ಲೈನ್‍ನಲ್ಲಿ èwww.sw.kar.nic.in ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆ ದಿನ.
ಷರತ್ತುಗಳು: ವಿದ್ಯಾರ್ಥಿಗಳು ದ್ವಿತೀಯ, ಅಂತಿಮ ವರ್ಷದ ಪಿ.ಯು.ಸಿ.ಯನ್ನು ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು. ಸಿ.ಬಿ.ಎಸ್.ಸಿ. ಮತ್ತು ಐ.ಸಿ.ಎಸ್.ಇ. ವತಿಯಿಂದ ನಡೆಸಲಾಗುವ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾದವರೂ ಸಹ ಈ ಯೋಜನೆಯಡಿ ಬಹುಮಾನ ಹಣ ಪಡೆಯಲು ಅರ್ಹರಿರುತ್ತಾರೆ.
ಪದವಿ, ಸ್ನಾತಕೋತ್ತರ ಪದವಿ, ಕೃಷಿ, ಪಶುಸಂಗೋಪನೆ, ಇಂಜಿನಿಯರಿಂಗ್, ಮೆಡಿಕಲ್ ಕೋರ್ಸ್‍ಗಳಿಗೆ ಸಂಬಂಧಿಸಿದಂತೆ ಪ್ರತಿ ವರ್ಷ ಪಬ್ಲಿಕ್ ಪರೀಕ್ಷೆ ಇದ್ದಲ್ಲಿ ಪ್ರತಿ ವರ್ಷ ಪ್ರಥಮ ಪ್ರಯತ್ನದಲ್ಲಿ ಪಾಸಾಗಿರಬೇಕು ಮತ್ತು ಅಂತಿಮವಾಗಿ ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು. ಈ ಕೋರ್ಸ್‍ಗಳಿಗೆ ಸೆಮಿಸ್ಟರ್ ಪದ್ಧತಿಯಿದ್ದಲ್ಲಿ ಎಲ್ಲಾ ಸೆಮಿಸ್ಟರ್‍ಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪಾಸಾಗಿರಬೇಕು ಮತ್ತು ಅಂತಿಮವಾಗಿ ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು. ಈ ಎರಡೂ ಕೋರ್ಸ್‍ಗಳಲ್ಲಿ ಪ್ರತಿ ವರ್ಷದ ಪರೀಕ್ಷೆ ಅಥವಾ ಸೆಮಿಸ್ಟರ್‍ಗಳಲ್ಲಿ Compartmental/Carryover system ರಡಿ ಪಾಸಾಗಿದ್ದರೆ ಅಂತಹವರು ಅರ್ಹರಿರುವುದಿಲ್ಲ.
ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಮೇಲ್ಕಂಡ ಕೋರ್ಸ್‍ಗಳಲ್ಲಿ ಹೊರ ರಾಜ್ಯಗಳಲ್ಲಿ ವ್ಯಾಸಂಗ ಮಾಡಿದ್ದರೆ ಅಂತಹವರು ಅರ್ಹರಿರುತ್ತಾರೆ. ಆದರೆ ಹೊರ ದೇಶಗಳಲ್ಲಿ ವ್ಯಾಸಂಗ ಮಾಡಿದ್ದರೆ ಅಂತಹವರು ಅರ್ಹರಿರುವುದಿಲ್ಲ. ರಾಜ್ಯ, ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ, ಯು.ಜಿಸಿ.ಯಿಂದ ಮಾನ್ಯತೆ ಪಡೆದ ಡೀಮ್ಡ್ ವಿಶ್ವ ವಿದ್ಯಾಲಯಗಳಡಿ ಬರುವ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಸ್ವಾಯತ್ತ (Autonomous) ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಹರಿರುತ್ತಾರೆ. ಹೆಚ್ಚಿನ ವಿವರಗಳಿಗೆ ಸಮಾಜ ಕಲ್ಯಾಣ ಇಲಾಖೆಯ ತಾಲೂಕು/ಜಿಲ್ಲಾ ಮಟ್ಟದ ಅಧಿಕಾರಿಗಳ ಕಚೇರಿ ಅಥವಾ ದೂರವಾಣಿ ಸಂಖ್ಯೆ;0824-2451237 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.