ಕಡಬ: ಗೃಹರಕ್ಷಕ ದಳ ಘಟಕದ ಪ್ರಭಾರ ಘಟಕಾಧಿಕಾರಿಯಾಗಿ ಶ್ರೀ ತೀರ್ಥೇಶ್ ರವರಿಗೆ ಹಸ್ತಾಂತರ

(ನ್ಯೂಸ್ ಕಡಬ) newskadaba.com ಕಡಬ, ಸೆ. 01. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಡಬ ಘಟಕದ ಘಟಕಾಧಿಕಾರಿ ಶ್ರೀ ಗೋಪಾಲ್ ರವರು ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಪ್ಲಟೂನ್ ಸಾರ್ಜಂಟ್ ಆಗಿದ್ದ ಶ್ರೀ ತೀರ್ಥೇಶ್ ಅಮೈ ಅವರನ್ನು ಪ್ರಭಾರ ಘಟಕಾಧಿಕಾರಿಯಾಗಿ ಕಡಬದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನೇಮಕಗೊಳಿಸಲಾಯಿತು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ರವರು ಶ್ರೀ ತೀರ್ಥೇಶ್ ಅಮೈ ಅವರಿಗೆ ಪ್ರಭಾರ ಘಟಕಾಧಿಕಾರಿಯಾಗಿ ಅಧಿಕಾರ ಪತ್ರವನ್ನು ಹಸ್ತಾಂತರಿಸಿ ಮಾತನಾಡಿ, ಪ್ರಭಾರ ಘಟಕಾಧಿಕಾರಿಯಾಗಿ ಕಡಬ ಘಟಕದ ಹಿರಿಯ ಗೃಹರಕ್ಷಕರ ಸಲಹೆ-ಸೂಚನೆಗಳನ್ನು ಅಳವಡಿಸಿಕೊಂಡು ಕರ್ತವ್ಯವನ್ನು ಮಾಡಬೇಕು ಹಾಗೂ ನಿವೃತ್ತ ಘಟಕಾಧಿಕಾರಿಯವರ  ಸಲಹೆಯನ್ನು ಕೇಳಿಕೊಂಡು ಮುನ್ನಡೆಯಬೇಕು ಮತ್ತು ಘಟಕದ ಗೃಹರಕ್ಷಕರೆಲ್ಲಾ ಪ್ರಭಾರ ಘಟಕಾಧಿಕಾರಿಯವರಿಗೆ ಸಹಕಾರವನ್ನು ನೀಡುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಉಪ್ಪಿನಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ದಿನೇಶ್ ಬಿ.,  ಕಡಬ ಘಟಕದ ನಿವೃತ್ತ ಘಟಕಾಧಿಕಾರಿ ಶ್ರೀಗೋಪಾಲ್, ಹಿರಿಯ ಗೃಹರಕ್ಷಕರಾದ ಸುಂದರ, ಜಯಪ್ರಕಾಶ್  ಉಪಸ್ಥಿತರಿದ್ದರು.  ಪ್ರಭಾರ ಘಟಕಾಧಿಕಾರಿ  ತೀರ್ಥೇಶ್ ಸ್ವಾಗತಿಸಿದರು. ಹಿರಿಯ ಗೃಹರಕ್ಷಕ ಸುಂದರ್ ವಂದಿಸಿದರು. ಸದರಿ ಕಾರ್ಯಕ್ರಮದಲ್ಲಿ ಕಡಬ ಘಟಕದ ಗೃಹರಕ್ಷಕ/ಗೃಹರಕ್ಷಕಿಯರು ಉಪಸ್ಥಿತರಿದ್ದರು.

Also Read  ಊರಿಗೆ ಹೋಗಲು ಬಸ್ ಇಲ್ಲದೇ ಪ್ರಯಾನಿಕರ ಪರದಾಟ..!

 

error: Content is protected !!
Scroll to Top