ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶ

(ನ್ಯೂಸ್‌ ಕಡಬ) ಮಂಗಳೂರು, ಸೆ. 1. ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮವು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ www.skillconnect.kaushalkar.com ಜಾಲತಾಣದಲ್ಲಿ ಉದ್ಯೋಗದಾತರು ಹಾಗೂ ಉದ್ಯೋಗಾಕಾಂಕ್ಷಿಗಳು ತಮ್ಮ ಹೆಸರು ಹಾಗೂ ಇನ್ನಿತರ ವಿವರಗಳೊಂದಿಗೆ ನೋಂದಾಯಿಸಿಕೊಳ್ಳಬೇಕು.

ಈ ಪೋರ್ಟಲ್ ನೆರವಿನಿಂದ ಕೈಗಾರಿಕೆ, ಉದ್ದಿಮೆಗಳಿಗೆ ಅವಶ್ಯ ಹಾಗೂ ಯೋಗ್ಯ ಮಾನವ ಸಂಪನ್ಮೂಲವನ್ನು ದೊರಕಿಸುವ ಹಾಗೂ ಯುವ ಜನತೆಗೆ ಸೂಕ್ತ ಉದ್ಯೋಗ ಹೊಂದಲು ಅವಕಾಶ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ವಿವಿಧ ಉದ್ದಿಮೆ, ಕೈಗಾರಿಕೆ, ಉದ್ಯೋಗದಾತರು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಮಾನವ ಸಂಪನ್ಮೂಲಕ್ಕೆ ಬೇಡಿಕೆ ಸಲ್ಲಿಸಿದಲ್ಲಿ, ಅದಕ್ಕನುಗುಣವಾಗಿ ಕೌಶಲ್ಯ ತರಬೇತಿಗಳನ್ನು ಸ್ಥಳೀಯ ಅಭ್ಯರ್ಥಿಗಳಿಗೆ ನೀಡುವ ಮೂಲಕ ಅವರನ್ನು ಸಜ್ಜುಗೊಳಿಸಿ ಉದ್ಯೋಗ ಕೈಗೊಳ್ಳಲು ಸಹಕರಿಸಲಾಗುತ್ತದೆ. ಜಿಲ್ಲೆಯ ಉದ್ಯೋಗದಾತರು ಹಾಗೂ ಉದ್ಯೋಗಾಕಾಂಕ್ಷಿಗಳು ನಿಗಮದ ಜಾಲತಾಣ www.kaushalkar.com ಗೆ ಭೇಟಿ ನೀಡಿ, ಸ್ಕಿಲ್ ಕನೆಕ್ಟ್ (SKILL CONNECT) ಗುಂಡಿಯನ್ನು (Button) ಆಯ್ಕೆ ಮಾಡುವ ಮೂಲಕ ನೋಂದಾಯಿಸಿಕೊಂಡು ಪ್ರಯೋಜನ ಪಡೆಯಬಹುದು. ಈ ಜಾಲತಾಣವು ಪ್ರಸ್ತುತಃ (Virtual) ವೇದಿಕೆಯಾಗಿದ್ದು, ಉದ್ಯೋಗದಾತರು Video Conference / Namaste Bharat / Zoom / Cisco webex / Google Meet ಇತ್ಯಾದಿ App ಗಳ ಮೂಲಕ ಉದ್ಯೋಗಾಕಾಂಕ್ಷಿಗಳ ಸಂದರ್ಶನವನ್ನು ನಡೆಸಬಹುದಾಗಿದೆ. ಈಗಾಗಲೇ ಈ ರೀತಿ ಸಂದರ್ಶನದಲ್ಲಿ ಭಾಗವಹಿಸಿ ಸುಮಾರು 900ಕ್ಕೂ ಹೆಚ್ಚು ಅಭ್ಯರ್ಥಿಗಳು ಉದ್ಯೋಗವನ್ನು ದೊರಕಿಸಿಕೊಂಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ, ನೆಲ ಮಾಳಿಗೆ, ಮಂಗಳೂರು ಮಹಾ ನಗರಪಾಲಿಕೆ ಕಟ್ಟಡ, ಲಾಲ್‍ಭಾಗ್, ಮಂಗಳೂರು, ( ಮೊಬೈಲ್ ಸಂಖ್ಯೆ : 7019381674 ) ಇಲ್ಲಿ ಸಂಪರ್ಕಿಸಬಹುದು ಎಂದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ತಾರಾನಾಥ್ ಕೆ.ವಿ. ತಿಳಿಸಿದ್ದಾರೆ.

Also Read  ಬೆಳ್ಳಂಬೆಳಗ್ಗೆ ಶೂಟೌಟ್ ಗೆ ನಲುಗಿದ ಸುಳ್ಯ..‼️ ➤ ಗುಂಡೇಟಿಗೆ ಓರ್ವ ಬಲಿ

error: Content is protected !!
Scroll to Top