(ನ್ಯೂಸ್ ಕಡಬ) newskadaba.com ಮಂಗಳೂರು. ಸೆ.01: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಮೀನುಗಾರಿಕೆ ಅವಧಿ ಸೆಪ್ಟೆಂಬರ್ 1 ರಿಂದ ಪ್ರಾರಂಭವಾಗಲಿದೆ. ಮೀನುಗಾರಿಕೆ ದೋಣಿಗಳನ್ನು ಸಮುದ್ರಕ್ಕೆ ಇಳಿಯಲು ಸಿದ್ಧವಾಗಿರಿಸಲಾಗಿದೆ. ಲಾಕ್‌ಡೌನ್ ಕಾರಣದಿಂದ ಇತರ ರಾಜ್ಯಗಳಿಗೆ ತೆರಳಿದ್ದ ವಲಸೆ ಮೀನುಗಾರರು ಹಲವು ದಿನಗಳ ಬಳಿಕ ಈಗ ವಾಪಾಸ್ ಆಗುತ್ತಿದ್ದಾರೆ. ಆಳ ಸಮುದ್ರದ ಮೀನುಗಾರಿಕೆ ಇಂದು ಪುನರಾರಂಭಗೊಂಡಿದೆ.
ಮೀನುಗಾರರು ಆಳ ಸಮುದ್ರದ ಮೀನುಗಾರಿಕೆಗೆ ಸಿದ್ಧತೆ ನಡೆಸಿದ್ದಾರೆ. ಲಭ್ಯವಿರುವ ಕಾರ್ಮಿಕರು ಸೇರಿ ಮೀನುಗಾರಿಕೆ ನಡೆಸಲು ಸಿದ್ದರಾಗಿದ್ದಾರೆ. ತಮ್ಮ ದೋಣಿಗಳನ್ನು ಸೋಮವಾರವೇ ಸಿದ್ದ ಪಡಿಸಿದ್ದು ಎಂಜಿನ್‌ಗಳನ್ನು ದುರಸ್ತಿ ಮಾಡಿ ಎಲ್ಲಾ ಅಂತಿಮ ತಯಾರಿಯನ್ನು ಮಾಡಿಕೊಂಡಿದ್ದಾರೆ. ಇನ್ನು ಮೀನುಗಾರಿಕೆಗೆ ಬೇಕಾಗಿರುವ ಐಸ್ ಪ್ಲಾಂಟ್‌ಗಳನ್ನು ತೆರೆಯಲಾಗಿದೆ. ಆರಂಭದಲ್ಲಿ, ಕೆಲವೇ ದೋಣಿಗಳು ಮಾತ್ರ ಮೀನುಗಾರಿಕೆಗೆ ತೆರಳಲಿದ್ದು ಬಳಿಕ ಹತ್ತು ದಿನಗಳ ಬಳಿಕ ಮೀನುಗಾರಿಕ ದೋಣಿ ಹಿಂತಿರುಗಲಿದೆ ಎಂದು ಬಂದರ್‌ನ ಮೀನುಗಾರ ಮಜೀದ್ ತಿಳಿಸಿದ್ದಾರೆ.