ಇಂದಿನಿಂದ ದೇವಾಲಯಗಳಲ್ಲಿ ಸೇವೆ ಪ್ರಾರಂಭ, ಅನ್ನದಾನವಿಲ್ಲ – ಕೋಟ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಮಂಗಳೂರು . ಸೆ.01:  ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಇಂದಿನಿಂದ ಸೇವೆ ಆರಂಭಿಸಬಹುದು. ಅನ್ನದಾನ ಮತ್ತು ಯಾವುದೇ ರೀತಿಯ ಸಭೆ ಸಮಾರಂಭಗಳಿಗೆ ಅವಕಾಶವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

 

ಮಾಧ್ಯಮಗಳ ಮುಂದೆ ಮಾತಾಡಿದ ಅವರು, ಆರೋಗ್ಯ ಇಲಾಖೆಗೆ ಅನುಮತಿ ಕೋರಿದ್ದೇವೆ. ಇಂದಿನಿಂದ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಸೇವೆ ಪ್ರಾರಂಭಿಸಬೇಕು ಎಂದರು. ಕೊರೊನಾ ಮಾರ್ಗಸೂಚಿಯಂತೆ ನೂರಾರು ಜನರು ಸೇರುವ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗುವುದಿಲ್ಲ 10 ರಿಂದ 15 ಮಂದಿ ಸೇರಿ ಮಾಡುವಂತಹ ಧಾರ್ಮಿಕ ಸೇವೆ ನಡೆಸಲು ಮಾತ್ರ ಅವಕಾಶ ನೀಡುವ ಚಿಂತನೆ ಇದೆ. ಕೋರೋನಾ ನಿಯಮದ ಮಿತಿಯ ಒಳಗೆ ಎಲ್ಲಾ ಸೇವೆಗಳು ಇರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

Also Read  ವಿಟ್ಲ: ಹಠಾತ್ತನೆ ಕುಸಿದುಬಿದ್ದು ವ್ಯಕ್ತಿ ಮೃತ್ಯು

 

 

error: Content is protected !!
Scroll to Top