ಸೂಪರ್ ಮಾರ್ಕೆಟ್ ದರೋಡೆ ಪ್ರಕರಣ : ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಬಂಟ್ವಾಳ ಪೊಲೀಸರು.!

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 01: ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಫರಂಗಿಪೇಟೆಯ ಸೂಪರ್ ಮಾರ್ಕೆಟ್ ನಲ್ಲಿ ಆಗಸ್ಟ್ 25 ರಂದು ರಾತ್ರಿ ಸುಮಾರು ೨೫ ಸಾವಿರ ಮೌಲ್ಯದ ದಿನಸಿ ಸಾಮಾಗ್ರಿ ಹಾಗೂ ನಗದು ಕಳವು‌ ಮಾಡಿರುವ ಆರೋಪಿಯನ್ನು ಕೆಲವೇ ದಿನಗಳಲ್ಲಿ‌ ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಲಾಯಿತು. ಬಂಧಿತ ಆರೋಪಿಯು ಮಂಗಳೂರು ತಾಲೂಕಿನ ಬೆಂಗ್ರೆ ಕಸಬ ನಿವಾಸಿಯಾದ ಮಹಮ್ಮದ್ ಅನ್ಸರ್ ಎಂದು ಗುರುತಿಸಲಾಗಿದ್ದು, ಈತನು ಈ ಹಿಂದೆ ಮಂಗಳೂರು ನಗರ ವ್ಯಾಪ್ತಿಯ ಪಾಂಡೇಶ್ವರ, ಬಂದರು,ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ದರೋಡೆ ಪ್ರಕರಣದ ಆರೋಪಿಯಾಗಿದ್ದು,ಈತನು ಕಳೆದ ೪ ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಬಂಟ್ವಾಳ ವೃತ್ತ ನಿರೀಕ್ಷಕರಾದ ಟಿ ಡಿ ನಾಗರಾಜ್ ರವರ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಅಪರಾಧ ವಿಭಾಗದ ಪಿ ಎಸ್ ಐ ಸಂಜೀವ ಕೆ ರವರ ನೇತೃತ್ವದಲ್ಲಿ ಎ ಎಸ್ ಐ ಬಾಲಕೃಷ್ಣ, ಸಿಬ್ಬಂದಿಯವರಾದ ರಾಧಾಕೃಷ್ಣ, ಸುರೇಶ್, ಪುನೀತ್ ಹಾಗೂ ವೃತ್ತ ನಿರೀಕ್ಷಕರ‌ ಅಪರಾಧ ವಿಭಾಗ ದ ಸಿಬ್ಬಂದಿಯವರಾದ ಗೋಣಿ ಬಸಪ್ಪ, ಕುಮಾರ್ ಹೆ ಚ್ ಕೆ, ವಿವೇಕ್ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Also Read  ಇಬ್ಬರು ವಿದ್ಯಾರ್ಥಿನಿಯರ ಮೇಲೆ ಶಿಕ್ಷಕನಿಂದಲೇ ರೇಪ್‌

 

error: Content is protected !!
Scroll to Top