ಕೆಎಸ್ಆರ್ಟಿಸಿ ಉಚಿತ ಬಸ್ ಪಾಸ್ ➤ ಸೇವಾಸಿಂಧೂ ಮೂಲಕ ಅರ್ಜಿ ಕಡ್ಡಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 31. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 2020-21 ನೇ ಸಾಲಿನ ಸಕಾಲ ಸಂಬಂಧಿತ ಸೇವೆಗಳಾದ ವಿದ್ಯಾರ್ಥಿ ಉಚಿತ, ರಿಯಾಯಿತಿ ಬಸ್ ಪಾಸ್, ವಿಕಲಚೇತನರ ರಿಯಾಯಿತಿ ಬಸ್ ಪಾಸ್, ಅಂಧರ ಉಚಿತ ಬಸ್ ಪಾಸ್, ಸ್ವಾತಂತ್ರ್ಯ ಹೋರಾಟಗಾರರ ಬಸ್ ಪಾಸ್, ಪತ್ನಿ / ವಿಧವಾ ಪತ್ನಿಯರ ಉಚಿತ ಕೂಪನ್ ಹಾಗೂ ಅಪಘಾತ ಪರಿಹಾರ ನಿಧಿ ಸೇವಾಸಿಂಧೂ ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಬಹುದು.
ಫಲಾನುಭವಿಗಳ ಬಸ್ ಪಾಸ್ ನವೀಕರಿಸಿಕೊಳ್ಳಲು ಅಥವಾ ಹೊಸ ಪಾಸುಗಳನ್ನು ಪಡೆದುಕೊಳ್ಳಲು ಸೇವಾಸಿಂಧೂ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಅರ್ಜಿಯಲ್ಲಿ ಆಧಾರ್, ಮೊಬೈಲ್ ನಂಬರ್ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಆಪ್ಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ. ಬಸ್ ಪಾಸ್ ಪಡೆಯುವ ಸಂದರ್ಭದಲ್ಲಿ ಮೂಲ ದಾಖಲೆಯ ಜೆರಾಕ್ಸ್ ಪ್ರತಿ ಹಾಜರುಪಡಿಸುವುದು ಕಡ್ಡಾಯವಾಗಿದೆ ಎಂದು ಕೆಎಸ್ಆರ್ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿಗಳ  ಪ್ರಕಟಣೆ ತಿಳಿಸಿದೆ.

Also Read  12 ಕಿ.ಮೀ. ದೂರ ಓಡಿ, ಕೊಲೆ ಆರೋಪಿ ಪತ್ತೆ ಮಾಡಿದ ಪೊಲೀಸ್ ಸ್ನೀಫರ್ ಡಾಗ್!

error: Content is protected !!
Scroll to Top