(ನ್ಯೂಸ್ ಕಡಬ) newskadaba.com ಮಂಗಳೂರು, ಆ. 31. ರಾಷ್ಟ್ರೀಯ ಶರಣ ಸಾಹಿತ್ಯ ದ.ಕ ಜಿಲ್ಲಾ ಘಟಕದ ವತಿಯಿಂದ ದಿನಾಂಕ 24ರಂದು ವಚನಗಳಲ್ಲಿ ಜೀವನ ಮೌಲ್ಯ ಮತ್ತು ಅನುಷ್ಠಾನ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ನಡೆಯಿತು. 8,9 ಹಾಗೂ 10ನೇ ತರಗತಿಗಳ ವಿದ್ಯಾರ್ಥಿಗಳಿಗೆ ಮೊದಲ ವಿಭಾಗದಲ್ಲಿ ಹಾಗೂ 10ನೇ ತರಗತಿಯಿಂದ ಮೇಲ್ಪಟ್ಟು ಪಿಯುಸಿ, ಕಾಲೇಜು ಹಾಗೂ ಸಾರ್ವಜನಿಕ ವಿಭಾಗದಲ್ಲಿಸ್ಪರ್ಧೆಗಳು ನಡೆದಿವೆ. ಸ್ಪರ್ಧೆಗಳನ್ನು ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ .ಜಿ. ಕಾಮತ್ ನಡೆಸಿಕೊಟ್ಟರು. ಈ ಸ್ಪರ್ಧೆಗಳು ಜಿಲ್ಲೆಯ ಎಲ್ಲಾ ತಾಲೂಕು ಹಂತಗಳಲ್ಲಿ ನಡೆಸಲಾಯಿತು.
ಫಲಿತಾಂಶ: ಮೊದಲ ವಿಭಾಗ:- ಮಂಗಳೂರು ತಾಲೂಕು: ಪ್ರಥಮ–ಚಿನ್ಮಯಿ ಭಟ್ ಹಾಗೂ ವೃಂದಾರಾವ್, ದ್ವಿತೀಯ–ಅಮೋಘ್, ತೃತೀಯ – ಶ್ರೀ ನಿಧಿ, ದ್ವಿತೀಯ ವಿಭಾಗ: ಮಂಗಳೂರು ತಾಲೂಕು: ಪ್ರಥಮ–ಶರಣಪ್ಪ ಮರಕಡ, ದ್ವಿತೀಯ–ರೀಮಾ ಎಂ, ತೃತೀಯ – ನಾಗಶ್ರೀ
ಕಡಬ ತಾಲೂಕು: ಪ್ರಥಮ–ದೀಪ್ತಿ ರಾವ್
ಬಂಟ್ವಾಳ ತಾಲೂಕು: ಪ್ರಥಮ– ಮೀನಾಕ್ಷಿ ಕೆ.
ಮೂಡಬಿದ್ರೆ ತಾಲೂಕು: ಪ್ರಥಮ–ವೀಕ್ಷಿತಾ, ದ್ವಿತೀಯ–ಪವಿತ್ರಾ
ಬೆಳ್ತಂಗಡಿ ತಾಲೂಕು – ಪ್ರಥಮ–ಗುಣವತಿ
ವಿಜೇತರು ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರವನ್ನು ಪಡೆಯಲಿದ್ದಾರೆ. ಮೌಲ್ಯ ಮಾಪನವನ್ನು ನಡೆಸುವಲ್ಲಿ ಶ್ರೀಮತಿ ರತ್ನಾವತಿ.ಜೆ. ಬೈಕಾಡಿ, ಶ್ರೀಮತಿ ಅರುಣಾ ಶಿವಾನಂದ್ ಹಾಗೂ ಲೀಲಾಧರ್ ಸಹಕರಿಸಿದರು. ಬಹುಮಾನ ವಿತರಣಾ ಸಮಾರಂಭವನ್ನು ದಿನಾಂಕ 05/09/2020 ರಂದು 11:30ಗಂಟೆಗೆ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸುಧಾಮ ಹಾಲ್‍ನಲ್ಲಿ ನೆರವೇರಿಸಲಾಗುವುದು.