ಮರ್ಧಾಳ: ಅತ್ಯಡ್ಕ ರಸ್ತೆ ಕಾಂಕ್ರೀಟೀಕರಣ

(ನ್ಯೂಸ್ ಕಡಬ) newskadaba.com ಕಡಬ, ಆ. 31. ಐತ್ತೂರು ಗ್ರಾಮ ಪಂಚಾಯತ್ ನ ಕೋಡಂದೂರು – ಅತ್ಯಡ್ಕ- ಸುಳ್ಯ ರಸ್ತೆಯ  ಅತ್ಯಡ್ಕ ಎಂಬಲ್ಲಿ ಶಾಸಕರ ಮುಖಾಂತರ ಗ್ರಾಮಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ 50/54ವಿಶೇಷ ಅನುದಾನದ ರೂ. 20ಲಕ್ಷದಲ್ಲಿ   375 ಮೀ. ರಸ್ತೆ ಕಾಂಕ್ರಿಟೀಕರಣ ನಡೆಯುತ್ತಿದ್ದು,   ಆ. 31  ರಂದು  ಜಿ. ಪಂ  ಇಂಜಿನಿಯರ್  ಸಂದಿಪ್ ಕುಮಾರ್   ಕಾಮಗಾರಿ ಪರಿಶೀಲಿಸಿದರು.  ಈ ಸಂದರ್ಭದಲ್ಲಿ ಐತೂರು ಗ್ರಾ ಪಂ  ಮಾಜಿ ಅಧ್ಯಕ್ಷ ಸತೀಶ್ .ಕೆ   ಸ್ಥಳೀಯರಾದ ಉಮೇಶ್ , ತಿಮ್ಮಪ್ಪಗೌಡ, ಭರತ್ ಅಮುಣಿಪಾಲ್ ಮೊದಲಾದವರು ಉಪಸ್ತಿತರಿದ್ದರು.

Also Read  ಮಂಗಳೂರು: ಆವರಣ ಗೋಡೆ ಕುಸಿದು ಮಗು ಮೃತ್ಯು

error: Content is protected !!
Scroll to Top