ನೂತನ ಶಿಕ್ಷಣ ನೀತಿಯ ವಿರುದ್ದ ಎನ್.ಎಸ್.ಯು.ಐ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 31.  ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿ ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನಲ್ಲಿ ಆಯೋಜಿಸಲಾದ ಸಮಾಲೋಚನಾ ಕಾರ್ಯಕ್ರಮಕ್ಕೆ ಎಬಿವಿಪಿ ಸಂಘಟನೆಯನ್ನು ಮಾತ್ರವೇ ಆಹ್ವಾನಿಸಿ ಇತರ ಸಂಘಟನೆಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಎನ್.ಎಸ್.ಯು.ಐ ದ.ಕ. ಜಿಲ್ಲಾ ಘಟಕದ ವತಿಯಿಂದ ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಎದುರು ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿ ಪ್ರತಿಭಟನೆ ನಡೆಸಿದರು.

ರಾಜ್ಯ ಸರಕಾರದ ಜತೆ ಸಮಾಲೋಚನೆ ಮಾಡದೇ ದೇಶದಲ್ಲಿ ಹಲವು ಸಂಘಟನೆಗಳಿದ್ದರೂ ಅವುಗಳ ಜೊತೆ ಚರ್ಚೆ ನಡೆಸದೆ ಕೇಂದ್ರ ಸರಕಾರವು ಏಕಾಏಕಿ ಹೊಸ ಶೈಕ್ಷಣಿಕ ನೀತಿಗೆ ಮುಂದಾಗಿದ್ದು,ಇದು ಶಿಕ್ಷಣದ ಕೇಸರೀಕರಣದ ಹುನ್ನಾರ ಎಂದು ಆರೋಪಿಸಿದರು. ಎನ್.ಎಸ್.ಯು.ಐ ನಗರ ಅಧ್ಯಕ್ಷ ಸವನಕ್ ರೈ, ಫಾರೂಕ್ ಬಯಬೆ, ಅನ್ವಿತ್ ಕಟೀಲ್, ಸವಾದ್ ಗೂನಡ್ಕ ಪಾಲ್ಗೊಂಡಿದ್ದರು.

error: Content is protected !!
Scroll to Top